alex Certify
ಕನ್ನಡ ದುನಿಯಾ       Mobile App
       

Kannada Duniya

ಕಲ್ಯಾಣ ಮಂದಿರವಾಗಿ ಬದಲಾಯ್ತು ಟಿ.ಆರ್.ಎಸ್ ಕಛೇರಿ

chandra-shekaraಹೈದರಾಬಾದ್ ಹಳೆ ನಗರದಲ್ಲಿದ್ದ ಟಿ ಆರ್ ಎಸ್ ಕಛೇರಿಯನ್ನು ಈಗ ಕಲ್ಯಾಣ ಮಂದಿರವನ್ನಾಗಿ ಪರಿವರ್ತಿಸಲು ಮುಂದಾಗಿದ್ದು, ಬಡ ಜನರ ವಿವಾಹಕ್ಕೆ ಜಾತಿ- ಧರ್ಮದ ಬೇಧವಿಲ್ಲದೆ ಉಚಿತವಾಗಿ ನೀಡಲು ತೀರ್ಮಾನಿಸಲಾಗಿದೆ.

2014 ರ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ಕ್ಷೇತ್ರದಿಂದ ಟಿ ಆರ್ ಎಸ್ ನಿಂದ ಕಣಕ್ಕಿಳಿದಿದ್ದ ರಶೀದ್ ಶರೀಫ್, ಹಳೆ ನಗರದ ಮೀರ್ ಆಲಂ ಮಂಡಿ ರಸ್ತೆಯಲ್ಲಿರುವ ಟಿ ಆರ್ ಎಸ್ ಕಛೇರಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಈಗ ಪಕ್ಷಕ್ಕೆ ಹೊಸ ಕಛೇರಿ ನಿರ್ಮಿಸಿರುವ ಕಾರಣ ಹಳೆ ಕಟ್ಟಡವನ್ನು ಕಲ್ಯಾಣ ಮಂದಿರವನ್ನಾಗಿ ಬಳಸಿಕೊಳ್ಳಲಾಗುವುದು ಎಂದಿದ್ದಾರೆ.

500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಂಡ ಬಳಿಕ ಹಲವು ವಿವಾಹಗಳು ಸ್ಥಗಿತಗೊಂಡಿವೆ ಇಲ್ಲ ಮುಂದೂಡಲ್ಪಟ್ಟಿವೆ. ಬಡ ಜನರು ಹಣ ದೊರೆಯದೆ ಕಂಗಾಲಾಗಿದ್ದಾರೆ. ಹೀಗಾಗಿ ಇಂತವರಿಗೆ ಉಚಿತವಾಗಿ ಕಲ್ಯಾಣ ಮಂದಿರವನ್ನು ನೀಡಲಾಗುವುದಲ್ಲದೇ 100 ಮಂದಿ ಅತಿಥಿಗಳಾಗಿ ಊಟದ ವ್ಯವಸ್ಥೆಯನ್ನು ಮಾಡಲೂ ಯೋಜಿಸಲಾಗಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...