alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ಕಿರುಕುಳದ ಆರೋಪ: ಸಂಸದನ ಪುತ್ರ ಅರೆಸ್ಟ್

ರಾಜ್ಯಸಭಾ ಸದಸ್ಯ, ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಪ್ರಮುಖ ಡಿ. ಶ್ರೀನಿವಾಸ ಅವರ ಪುತ್ರ ಸಂಜಯ್ ನನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ನಿಜಾಮಾಬಾದ್ ನ ಮಾಜಿ ಮೇಯರ್ ಆಗಿದ್ದ ಸಂಜಯ್, ತಮ್ಮದೇ ನರ್ಸಿಂಗ್ ಕಾಲೇಜಿನ ಕೆಲ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ಈ ಬಗ್ಗೆ ತನಿಖೆ ನಡೆಸುವ ಸಲುವಾಗಿ ಸಂಜಯ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿಜಾಮಾಬಾದ್ ನಲ್ಲಿರುವ ಶಂಕರಿ ನರ್ಸಿಂಗ್ ಕಾಲೇಜಿನ ಕೆಲ ಯುವತಿಯರು ತೆಲಂಗಾಣದ ಗೃಹ ಸಚಿವ ನರಸಿಂಹರೆಡ್ಡಿಯವರನ್ನ ಎರಡು ವಾರಗಳ ಹಿಂದೆ ಭೇಟಿಯಾಗಿ ಸಂಜಯ್ ಅವರಿಂದ ಲೈಂಗಿಕ ಕಿರುಕುಳವಾಗ್ತಿರುವ ಬಗ್ಗೆ ದೂರು ನೀಡಿದ್ದಾರೆ.

ತಮ್ಮ ಖಾಸಗಿ ಕೋಣೆಗೆ ಕಾಲೇಜಿನ ಕೆಲ ಯುವತಿಯರನ್ನು ಕರೆಸಿಕೊಂಡು ತಮ್ಮ ಲೈಂಗಿಕ ತೃಷೆಗೆ ಸಹಕರಿಸುವಂತೆ ಬಲವಂತಪಡಿಸಿದರಂತೆ. ಇದಕ್ಕೆ ಒಪ್ಪದಿದ್ದಾಗ ಯುವತಿಯರಿಗೆ ಅಸಭ್ಯ ಭಾಷೆಯಲ್ಲಿ ನಿಂದಿಸಿದ್ದಾರೆ ಅಂತ ಯುವತಿಯರು ಸಂಜಯ್ ವಿರುದ್ಧ ದೂರು ನೀಡಿದ್ದಾರೆ. ಹಾಗಾಗಿ ತಮ್ಮನ್ನು ಬೇರೆ ಕಾಲೇಜಿಗೆ ವರ್ಗಾಯಿಸುವಂತೆ ಯುವತಿಯರು ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಸಂಬಂಧ ನಿಜಾಮಾಬಾದ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354, 354 ಎ ಅಡಿಯಲ್ಲಿ ಪೊಲೀಸರು ಸಂಜಯ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಪೊಲೀಸರು ಬಂಧಿಸಬಹುದೆಂಬ ಸುದ್ದಿ ತಿಳಿದ ಕೂಡಲೇ ಸಂಜಯ್ ತಲೆಮರೆಸಿಕೊಂಡು ನಿರೀಕ್ಷಣಾ ಜಾಮೀನು ಪಡೆಯೋಕೆ ಮುಂದಾದ್ರು.

ಶುಕ್ರವಾರದಂದು ಪೊಲೀಸರು ಆಗಸ್ಟ್ 12ನೇ ತಾರೀಕಿನ ಒಳಗೆ ಪೊಲೀಸರಿಗೆ ಶರಣಾಗುವಂತೆ ನೊಟೀಸ್ ನೀಡಿದ್ದರು. ಆನಂತರದಲ್ಲಿ ಸಂಜಯ್ ಭಾನುವಾರದಂದು ವಕೀಲರ ಜೊತೆಗೆ ಸಹಾಯಕ ಕಮೀಷನರ್ ಕಚೇರಿಯಲ್ಲಿ ಹಾಜರಾದರು. ನಂತರದಲ್ಲಿ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...