alex Certify
ಕನ್ನಡ ದುನಿಯಾ       Mobile App
       

Kannada Duniya

ಟಿಕೆಟ್ ನೀಡದಿದ್ರೆ ಸೂಸೈಡ್ ಮಾಡಿಕೊಳ್ಳುವ ಬೆದರಿಕೆ

ತಾನು ಶಾಸಕಿಯಾಗಲೇಬೇಕು, ಮಂತ್ರಿಯಾಗಬೇಕೆಂಬ ಕನಸು ಕಂಡಿರುವ ಮಹಿಳಾ ನಾಯಕಿ ತನ್ನ ಪಕ್ಷದಿಂದ ಟಿಕೆಟ್ ಸಿಗಲಿಲ್ಲವೆಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿ ಅಚ್ಚರಿ ಮೂಡಿಸಿದ್ದಾರೆ.

ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ ಟಿ.ಆರ್.ಎಸ್. ಪಕ್ಷವು 107 ಅಭ್ಯರ್ಥಿಗಳ‌‌ ಪಟ್ಟಿ ಪ್ರಕಟಿಸಿದೆ. ನಲಗೊಂಡ ಜಿಲ್ಲೆ ಹುಝೂರ್ ನಗರ ಕ್ಷೇತ್ರದಿಂದ‌ ಟಿಕೆಟ್ ಆಕಾಂಕ್ಷಿಯಾಗಿದ್ದ ಟಿ.ಆರ್.ಎಸ್. ನಾಯಕಿ ಕೆ. ಶಂಕರಮ್ಮಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಆತ್ಮಹತ್ಯೆ ಬೆದರಿಕೆ ಒಡ್ಡಿದ್ದಾರೆ.

ಇಂಧನ ಸಚಿವ ಸಿ. ಜಗದೀಶ್ ರೆಡ್ಡಿ ಅವರು ಕಳೆದ ನಾಲ್ಕು ವರ್ಷದಿಂದ ತಮಗೆ ಕಿರುಕುಳ ನೀಡುತ್ತಿದ್ದಾರೆ, ಈಗ ಟಿಕೆಟ್ ತಪ್ಪಿಸಲು ಪ್ರಯತ್ನಿಸಿದ್ದಾರೆಂದು ಶಂಕರಮ್ಮ ಇದೇ ವೇಳೆ ಆರೋಪಿಸಿದ್ದಾರೆ. ಅನಿವಾಸಿ ಭಾರತೀಯ ಎಸ್. ಸೈದಿ ರೆಡ್ಡಿಯವರಿಗೆ ಟಿಕೆಟ್ ಕೊಡಿಸಲು ಜಗದೀಶ್ ಡೀಲ್ ಮಾಡಿಕೊಂಡಿದ್ದಾರೆಂಬ ಆಪಾದಿಸಿದ್ದಾರೆ.

ಟಿ.ಆರ್.ಎಸ್. ಈಗಾಗಲೇ 107 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಹುಝೂರ್ ನಗರ ಸೇರಿ ಹನ್ನೆರಡು ಕ್ಷೇತ್ರಕ್ಕೆ ಹೆಸರು ಅಂತಿಮಗೊಳಿಸಿಲ್ಲ. ಕಳೆದ ಚುನಾವಣೆಯಲ್ಲಿ ಶಂಕರಮ್ಮ ಆ ಕ್ಷೇತ್ರದಲ್ಲಿ ಸೋತಿದ್ದರು. ಕಾಂಗ್ರೆಸ್ ಇಲ್ಲಿ ಗೆದ್ದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...