alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲ್ ನಲ್ಲೇ ವಿವಾಹಿತ ಮಹಿಳೆ ಮೇಲೆ ಆ್ಯಸಿಡ್ ದಾಳಿ

ರಾಜಸ್ತಾನದ ಜೈಪುರದಲ್ಲಿ 27 ವರ್ಷದ ವಿವಾಹಿತ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಆ್ಯಸಿಡ್ ಎರಚಿದ್ದಾನೆ. ತನ್ನ ಜೊತೆಗೆ ಲಿವ್ ಇನ್ ಸಂಬಂಧ ಹೊಂದುವಂತೆ ಆತ ಮಹಿಳೆಯನ್ನು ಪೀಡಿಸುತ್ತಿದ್ದ. ಅವಳು ಒಪ್ಪದೇ ಇದ್ದಾಗ ಆ್ಯಸಿಡ್ ಹಾಕಿದ್ದಾನೆ.

ಟ್ರಿಟಾನ್ ಮಾಲ್ ನಲ್ಲಿ ಆಕೆ ಹೌಸ್ ಕೀಪರ್ ಆಗಿದ್ಲು. ಆರೋಪಿ ಹಾಗೂ ಆ್ಯಸಿಡ್ ದಾಳಿಗೊಳಗಾದ ಮಹಿಳೆ ಇಬ್ಬರೂ ಒಂದೇ ಏರಿಯಾದಲ್ಲಿ ವಾಸವಾಗಿದ್ರು. ಆಟೋ ರಿಕ್ಷಾ ಚಾಲಕನಾಗಿರೋ ಅವನಿಗೆ ಈಗಾಗ್ಲೇ ಮೂರು ಮದುವೆಯಾಗಿದೆ.

ಆದ್ರೆ ಪತ್ನಿಯರೆಲ್ಲ ಬಿಟ್ಟು ಹೋಗಿದ್ದಾರೆ. ಈಗ ಆತ ವಿವಾಹಿತ ಮಹಿಳೆ ಮೇಲೆ ಕಣ್ಣು ಹಾಕಿದ್ದ. ಮಾಲ್ ಗೇ ಬಂದಿದ್ದ ಆತ ತನ್ನ ಜೊತೆಯಲ್ಲಿ ವಾಸಿಸುವಂತೆ ಅವಳನ್ನು ಪೀಡಿಸಿದ್ದಾನೆ. ಮಾಲ್ ನಲ್ಲೇ ಅವಳ ಮೇಲೆ ಆ್ಯಸಿಡ್ ಎರಚಿದ್ದಾನೆ.

ಆಸಿಡ್ ದಾಳಿಯಲ್ಲಿ ಇಬ್ಬರಿಗೂ ಸುಟ್ಟ ಗಾಯಗಳಾಗಿವೆ. ಮಹಿಳೆಯ ಮುಖ ಮತ್ತು ಕೈ ಸುಟ್ಟಿದೆ. ಆರೋಪಿಗೂ ಶೇ.20ರಷ್ಟು ಸುಟ್ಟ ಗಾಯಗಳಾಗಿವೆ, ಸದ್ಯ ಆತ ಪೊಲೀಸರ ವಶದಲ್ಲಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...