alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ಅಧಿಕಾರಿಗಳು ಜೀನ್ಸ್ ಧರಿಸಲು ಬಿತ್ತು ಬ್ರೇಕ್

ತ್ರಿಪುರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ತನ್ನ ಅಧಿಕಾರಿಗಳಿಗೆ ಡ್ರೆಸ್ ಕೋಡ್ ಜಾರಿಗೆ ತರಲು ಮುಂದಾಗಿದೆ. ಕಚೇರಿ ಕಾರ್ಯದ ವೇಳೆ ಜೀನ್ಸ್, ಕೂಲಿಂಗ್ ಗ್ಲಾಸ್ ಹಾಗೂ ಡೆನಿಮ್ ಉಡುಗೆಯನ್ನು ಧರಿಸದಂತೆ ಸೂಚಿಸಿದ್ದು, ಈ ಆದೇಶಕ್ಕೆ ವಿರೋಧ ಪಕ್ಷಗಳು ಟೀಕೆ ಮಾಡಿವೆ.

ಶಿಕ್ಷಣ, ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಸುಶೀಲ್ ಕುಮಾರ್ ಈ ಆದೇಶವನ್ನು ಹೊರಡಿಸಿದ್ದಾರೆ. ಅಧಿಕಾರಿಗಳು ವಸ್ತ್ರ ಸಂಹಿತೆಯನ್ನು ಪಾಲಿಸುವಂತೆ ತಿಳಿಸಲಾಗಿದೆ. ಸಿ.ಎಂ. ಹಾಗೂ ಸಚಿವರು ಭಾಗವಹಿಸುವ ಸಭೆಯಲ್ಲಿ ಅಧಿಕಾರಿಗಳು ವಸ್ತ್ರ ಸಂಹಿತೆ ಪ್ರಕಾರ ಹಾಜರಾಗುವುದು ಕಡ್ಡಾಯವಾಗಿದೆ.

ಉನ್ನತ ಮಟ್ಟದ ಸಭೆಯ ವೇಳೆ ಅಧಿಕಾರಿಗಳು ಮೊಬೈಲ್ ನಲ್ಲಿ ಮೆಸೇಜ್ ನೋಡುವುದು ಹಾಗೂ ಕಳುಹಿಸೋದಕ್ಕೂ ಕಡಿವಾಣ ಹಾಕಲಾಗಿದೆ.

ವಿರೋಧ ಪಕ್ಷ ಕಾಂಗ್ರೆಸ್, ವಸ್ತ್ರ ಸಂಹಿತೆ ಜಾರಿಗೆ ತರಲು ಹೊರಟಿರುವ ಸರ್ಕಾರದ ಈ ಆದೇಶವನ್ನು ಟೀಕಿಸಿದೆ. ಈ ಆದೇಶ ಸರ್ಕಾರಿ ಅಧಿಕಾರಿಗಳ ಹಕ್ಕುಗಳ ಮೇಲೆ ಅತಿಕ್ರಮಣ ಮಾಡಿದಂತಿದ್ದು, ನಮ್ಮ ಸಮಾಜದಲ್ಲಿ ಹಿಂದೆ ಇದ್ದ ಊಳಿಗಮಾನ್ಯ ಪದ್ಧತಿಯನ್ನು ಪ್ರತಿಬಿಂಬಿಸುವಂತಿದೆ ಎಂದು ಕಿಡಿಕಾರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...