alex Certify
ಕನ್ನಡ ದುನಿಯಾ       Mobile App
       

Kannada Duniya

ಬೃಹತ್ ತಲೆಯನ್ನು ಹೊಂದಿದ್ದ ಮಗು ಇನ್ನಿಲ್ಲ

big-head

ವಿಚಿತ್ರ ಖಾಯಿಲೆಯಿಂದಾಗಿ ಬೃಹತ್ ತಲೆಯನ್ನು ಹೊಂದಿದ್ದ ತ್ರಿಪುರಾದ ಬಾಲಕಿ ಮೃತಪಟ್ಟಿದ್ದಾಳೆ. ಶಸ್ತ್ರಚಿಕಿತ್ಸೆಗೂ ಮುನ್ನವೇ ಮಗು ಇಹಲೋಕ ತ್ಯಜಿಸಿದೆ. ಭಾನುವಾರ ಉಸಿರಾಟದ ತೊಂದರೆಯಿಂದಾಗಿ ಮಗು ಮೃತಪಟ್ಟಿದೆ ಅಂತಾ ತಾಯಿ ಫಾತಿಮಾ ಬೇಗಂ ತಿಳಿಸಿದ್ದಾಳೆ.

ಈ ಬಾಲಕಿಗೆ ಐದು ವರ್ಷವಾಗಿತ್ತು. ಹುಟ್ಟುವಾಗ್ಲೇ ಜಲಮಸ್ತಿಷ್ಕ ಎಂಬ ಖಾಯಿಲೆ ಇತ್ತು. ಮಗುವಿನ ತಲೆ ಸುಮಾರು ಮೂರು ಪಟ್ಟು ದೊಡ್ಡದಾಗಿತ್ತು. 37 ಇಂಚು ಗಾತ್ರಕ್ಕೆ ಊದಿಕೊಂಡಿತ್ತು. ಇದರಿಂದಾಗಿ ಮೆದುಳಿನ ಮೇಲೆ ಒತ್ತಡ ಬೀಳುತ್ತಿತ್ತು. ಬಾಲಕಿಗೆ ಕುಳಿತುಕೊಳ್ಳಲು ಕೂಡ ಸಾಧ್ಯವಾಗುತ್ತಿರಲಿಲ್ಲ.

ಫೋರ್ಟಿಸ್ ಆಸ್ಪತ್ರೆಯಲ್ಲಿ ಹಲವು ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, 94 ಸೆಮೀ ಇದ್ದ ಮಗುವಿನ ತಲೆ 58 ಸೆಂಟಿ ಮೀಟರ್ ನಷ್ಟಾಗಿತ್ತು. ತೀರಾ ವಿಚಿತ್ರ ಮತ್ತು ಅಪರೂಪದ ಖಾಯಿಲೆಯಾಗಿದ್ದರಿಂದ ಜಗತ್ತಿನಾದ್ಯಂತ ಈ ಮಗುವಿನ ದೇಹಸ್ಥಿತಿ ಚರ್ಚೆಯಾಗಿತ್ತು. ಮಗುವಿನ ಚೇತರಿಕೆಗಾಗಿ ವೈದ್ಯರು ಇನ್ನೊಂದು ಶಸ್ತ್ರಚಿಕಿತ್ಸೆ ಮಾಡಬೇಕು ಎಂದುಕೊಳ್ಳುವಷ್ಟರಲ್ಲೇ ಕೊನೆಯುಸಿರೆಳೆದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...