alex Certify
ಕನ್ನಡ ದುನಿಯಾ       Mobile App
       

Kannada Duniya

ನಿರುದ್ಯೋಗಿಗಳಿಗೆ ತ್ರಿಪುರಾ ಸಿಎಂ ಕೊಟ್ಟ ಸಲಹೆ ಏನು?

ಪದವೀಧರರು ಸರ್ಕಾರಿ ಉದ್ಯೋಗಕ್ಕಾಗಿ ಅಲೆದಾಡದೇ ಸ್ವಉದ್ಯೋಗ ಮಾಡುವತ್ತ ಗಮನ ಹರಿಸಬೇಕು ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಹೇಳಿದ್ದಾರೆ.

ತ್ರಿಪುರಾದಲ್ಲಿ ಮಾತನಾಡಿದ ಅವರು, ಪದವೀಧರರು ಸರ್ಕಾರಿ ನೌಕರಿಗಾಗಿ ಕಾಯದೇ ಆಕಳನ್ನು ಖರೀದಿಸಿ, ಹಾಲು ಮಾರುವ ಉದ್ಯೋಗ ಮಾಡಿದರೂ ಸಾಕು 10 ವರ್ಷಗಳಲ್ಲಿ 10 ಲಕ್ಷ ದುಡಿಯಬಹುದು. ಇನ್ನು ರಾಜಕೀಯದವರ ಬಳಿ ದುಂಬಾಲು ಬಿದ್ದು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವುದಕ್ಕಿಂತ ಪಾನ್ ಶಾಪ್ ಇಟ್ಟರೂ ಸಾಕು, ಸಾಕಷ್ಟು ದುಡಿಯಬಹುದು ಎಂದಿದ್ದಾರೆ.

ಅಲ್ಲದೇ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲೂ ನೀವು ಸ್ವಂತ ಉದ್ಯೋಗ ಮಾಡಬಹುದು ಎಂದು ಬಿಪ್ಲಬ್ ದೇವ್ ಹೇಳಿದ್ದಾರೆ. ತಮ್ಮ ಹೇಳಿಕೆಗಳಿಂದಲೇ ಬಿಪ್ಲಬ್ ದೇಬ್ ಪದೇ ಪದೇ ವಿವಾದಕ್ಕೆ ಗುರಿಯಾಗುತ್ತಿದ್ದು, ಅವರ ಈ ಹೇಳಿಕೆಯೂ ಈಗ ಟೀಕೆಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...