alex Certify
ಕನ್ನಡ ದುನಿಯಾ       Mobile App
       

Kannada Duniya

ಕುತೂಹಲ ಮೂಡಿಸಿದೆ ‘ತ್ರಿವಳಿ ತಲಾಖ್’ ತೀರ್ಪು

sc-trivali

ನವದೆಹಲಿ: ಮುಸ್ಲಿಂ ಸಮಾಜದಲ್ಲಿ ಚಾಲ್ತಿಯಲ್ಲಿರುವ ತ್ರಿವಳಿ ತಲಾಖ್ ಕುರಿತಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ಪ್ರಕಟಿಸಲಿದೆ.

ವಿವಾದಾತ್ಮಕ ತ್ರಿವಳಿ ತಲಾಖ್ ಕುರಿತಾಗಿ ಭಾರೀ ಚರ್ಚೆಯೇ ನಡೆದಿತ್ತು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸಿತ್ತು.

ಸಿ.ಜೆ.ಐ. ಜೆ.ಎಸ್. ಕೇಹರ್, ನ್ಯಾ. ಕುರಿಯನ್ ಜೋಸೆಫ್, ನ್ಯಾ. ಆರ್.ಎಫ್. ನಾರಿಮನ್, ನ್ಯಾ. ಯು. ಲಲಿತ್, ನ್ಯಾ. ಎಸ್. ಅಬ್ದುಲ್ ನಜೀರ್ ಅವರನ್ನೊಳಗೊಂಡ ಸಂವಿಧಾನ ಪೀಠ ಕೋರ್ಟಿನ ಬೇಸಿಗೆ ರಜೆ ಅವಧಿಯಲ್ಲಿ 6 ದಿನಗಳ ಕಾಲ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು.

ಏಕಾಏಕಿ ತ್ರಿವಳಿ ತಲಾಖ್ ನೀಡುವುದು, ಕೆಲವೊಮ್ಮೆ ಮೊಬೈಲ್ ನಲ್ಲಿಯೇ ತಲಾಖ್ ನೀಡಿದ್ದರ ಬಗ್ಗೆ ಅರ್ಜಿದಾರರು ಮನವಿಯಲ್ಲಿ ತಿಳಿಸಿದ್ದರು. ತಲಾಖ್ ಮೂಲಕ ಏಕಾಏಕಿ ವಿಚ್ಚೇದನ ನೀಡುವುದರ ಕುರಿತಾಗಿ ಪ್ರಶ್ನಿಸಿದ್ದರು. ತ್ರಿವಳಿ ತಲಾಖ್ ಸಂವಿಧಾನ ಬಾಹಿರವಾಗಿದೆ ಎಂದು ದೂರಿದ್ದರು.

ಪ್ರಸ್ತುತ ವಿಚಾರಣೆಯಲ್ಲಿ ಬಹುಪತ್ನಿತ್ವವನ್ನು ಪರಿಗಣಿಸದೇ, ತ್ರಿವಳಿ ತಲಾಖ್ ಮುಸ್ಲಿಂ ಸಮಾಜಕ್ಕೆ ಮೂಲಭೂತ ಹಕ್ಕಿನ ಭಾಗವೇ ಎಂದು ಮಾತ್ರ ಪರಿಗಣಿಸುವುದಾಗಿ ಕೋರ್ಟ್ ಹೇಳಿತ್ತು.

ಅಲ್ಲದೇ ವಿಚಾರಣೆ ಸಂದರ್ಭದಲ್ಲಿ ತ್ರಿವಳಿ ತಲಾಖ್ ಹೀನ ಪದ್ಧತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಇಂದು ಈ ಕುರಿತಾದ ತೀರ್ಪು ಹೊರ ಬೀಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...