alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿಯೇ ಇದೆ ಈ ಅಪಾಯಕಾರಿ ದ್ವೀಪ…!

ನಾಗರೀಕತೆಯಿಂದ ದೂರ ಉಳಿದಿರುವ ದ್ವೀಪಕ್ಕೆ ಯಾರಾದರೂ ಕಾಲಿಟ್ಟರೆ ಅವರ ಮೇಲೆ ದಾಳಿ ಖಚಿತ. ಇಂಥದ್ದೊಂದು ದ್ವೀಪ ಭಾರತಕ್ಕೆ ಹೊಂದಿಕೊಂಡಂತೆಯೇ ಇರುವುದು ವಿಶೇಷ. ಬಂಗಾಳ ಕೊಲ್ಲಿಯ ಉತ್ತರ ಸೆಂಟಿನಲ್ ದ್ವೀಪವಿದ್ದು, ಅಲ್ಲಿ ಸೆಂಟಿನೀಸ್ ಬುಡಕಟ್ಟು ಜನಾಂಗದವರಿದ್ದಾರೆ. ಇನ್ನು ಅಚ್ಚರಿ ಎಂದರೆ ಈಗಲೂ ಈ ದ್ವೀಪ ವಾಸಿಗಳು ಹೊರಗಿನ ಪ್ರಪಂಚಕ್ಕೆ ಅತಿ ಸೀಮಿತ ಸಂಪರ್ಕ ಹೊಂದಿದ್ದಾರೆ.

ಈ ದ್ವೀಪಕ್ಕೆ ಹೋಗಲು ಪ್ರಯತ್ನ ಮಾಡಿದವರೆಲ್ಲ ಆಕ್ರಮಣಕ್ಕೊಳಗಾಗಿದ್ದಾರೆ ಇಲ್ಲ ಕೊಲ್ಲಲ್ಪಟ್ಟಿದ್ದಾರೆ. ಕಳೆದ ತಿಂಗಳು ಭಾರತದ ಗೃಹ ಸಚಿವಾಲಯ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಪ್ರವಾಸಿಗರನ್ನು ಆ ದ್ವೀಪಕ್ಕೆ ಕರೆದೊಯ್ದಿತ್ತು. ಈ ಹಿಂದೆ ಈ ಪ್ರದೇಶ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು.

ಜೀವಕ್ಕೆ ಅಪಾಯಕರವಾದ ದ್ವೀಪ ಎಂಬ ಕಾರಣಕ್ಕೆ ಈ ದ್ವೀಪದ ಮೂರು ಮೈಲಿ ದೂರದಿಂದಲೇ ನಿರ್ಬಂಧಿತ ಪ್ರದೇಶವಾಗಿ ಭಾರತ ಸರ್ಕಾರ ಗುರುತಿಸಿತ್ತು. ಇದೀಗ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ಆ ದ್ವೀಪವನ್ನು ಅಭಿವೃದ್ಧಿ ಮಾಡಬೇಕೆಂಬ ಆಶಯ ಹೊಂದಲಾಗಿದೆ. ಇಷ್ಟರ ನಡುವೆಯೂ ಆ ದ್ವೀಪಕ್ಕೆ ಹೋದವರು ಎಷ್ಟು ಸೇಫ್ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ವರದಿಗಳ ಪ್ರಕಾರ 2006 ರಲ್ಲಿ ಭಾರತದ ಇಬ್ಬರು ಮೀನುಗಾರರು ದ್ವೀಪ ವಾಸಿಗಳಿಂದ ಕೊಲ್ಲಲ್ಪಟ್ಟಿದ್ದರು. ಮೀನುಗಾರರನ್ನು ರಕ್ಷಿಸಲು ಕೋಸ್ಟಲ್ ಗಾರ್ಡ್ ಗಳು ಹೆಲಿಕಾಪ್ಟರ್ ಬಳಸಿದರಾದರೂ ಹೆಲಿಕ್ಯಾಪ್ಟರ್ ಇಳಿಸುವುದಕ್ಕೂ ಅಲ್ಲಿನ ವಾಸಿಗಳು ಬಿಟ್ಟಿರಲಿಲ್ಲ. ಹೆಲಿಕ್ಯಾಪ್ಟರ್ ಮೇಲೆ ಬಾಣ ಹೊಡೆದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...