alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯದಲ್ಲಿ ಮಿಂಚಲು ಮಹಿಳೆಯರ ನಿರ್ವಸ್ತ್ರ ಫೋಟೋ

ಜಾರ್ಖಂಡದ ಬುಡಕಟ್ಟು ನಾಯಕನೊಬ್ಬ ರಾಜಕೀಯದಲ್ಲಿ ಮಿಂಚಲು ಅವಮಾನಕರ ಕೆಲಸಕ್ಕೆ ಕೈ ಹಾಕಿದ್ದಾನೆ. ಆದಿವಾಸಿ ಮಹಿಳೆಯರ ಬೆತ್ತಲೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಈತನ ವಿರುದ್ಧ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗ್ತಿದ್ದು, ಬುಡಕಟ್ಟು ಜನಾಂಗ ದೂರು ದಾಖಲಿಸಿದೆ.

ಮೂಲಗಳ ಪ್ರಕಾರ ಬುಡಕಟ್ಟು ಮಹಾಸಭೆ ನಾಯಕ ರಾಮಶ್ರೀ ಮಿಶ್ರಾ ಬುಡಕಟ್ಟು ಜನಾಂಗದ ಮಕ್ಕಳು-ಸೊಸೆಯಂದಿರ ನಿರ್ವಸ್ತ್ರ ಫೋಟೋವನ್ನು ತೆಗೆದು ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾನೆ. ಇದ್ರ ಜೊತೆಗೆ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗೆ ಹಾಗೂ ಪತ್ರಿಕಾ ಪ್ರಕಟಣೆಗೆ ಕಳುಹಿಸಿದ್ದಾನೆ.

ರಾಜ್ಯ ಸರ್ಕಾರಕ್ಕೆ ಮಾತ್ರ ಫೋಟೋ ಕಳುಹಿಸುವ ಶರತ್ತಿನ ಮೇಲೆ ಸಿಂಗ್ ನಿರ್ವಸ್ತ್ರ ಫೋಟೋ ತೆಗೆದಿದ್ದ. ಆದ್ರೆ ಮಾತು ತಪ್ಪಿದ್ದಾನೆ. ರಾಮಶ್ರೀ ಮಿಶ್ರಾ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಬುಡಕಟ್ಟು ಜನಾಂಗದ ಜನರಿಗೆ ಸಾಮಾಜಿಕ ಜಾಲತಾಣದ ಬಗ್ಗೆ ಮಾಹಿತಿಯಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ ಎಂಬ ಸುದ್ದಿ ಅವರ ಕಿವಿಗೆ ತಲುಪಿದೆ.

ಡಿವಿಸಿಯಲ್ಲಿ ಬುಡಕಟ್ಟು ಜನಾಂಗದ ಮಹಿಳೆಯರ ಮಕ್ಕಳಿಗೆ ಕೆಲಸ ಕೊಡಿಸಲು ಒತ್ತಾಯಿಸಿ ಈ ಫೋಟೋ ತೆಗೆಯಲಾಗಿತ್ತು. ಮಿಶ್ರಾ ಮಹಿಳಾ ಕಾರ್ಯಕರ್ತೆಯರು ಈ ಫೋಟೋ ತೆಗೆದಿದ್ದರು. ಆದ್ರೀಗ ನಮಗೆ ಅನ್ಯಾಯವಾಗಿದೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಈ ಮಧ್ಯೆ ತಪ್ಪು ಒಪ್ಪಿಕೊಂಡಿರುವ ಮಿಶ್ರಾ ಕ್ಷಮೆ ಕೋರಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...