alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯುತ್ ಸಂಪರ್ಕ ಕಲ್ಪಿಸಲು 300 ಕಿ.ಮೀ. ನಡಿಗೆ…!

ಪರ್ವತಗಳ ಸಮೀಪ ಇರುವ ಕುಗ್ರಾಮಗಳಲ್ಲಿ ಚಾರಣ ಮಾಡುವ ಸಾಹಸಿಗಳಿಗೆ ಎದುರಾಗುವ ದೊಡ್ಡ ಸಮಸ್ಯೆ ಅಂದ್ರೆ ವಿದ್ಯುತ್. ಕೆಲವೊಂದು ಊರುಗಳಲ್ಲಿ ಮೊಬೈಲ್ ಚಾರ್ಜ್ ಮಾಡಲು ಕೂಡ ವಿದ್ಯುತ್ ವ್ಯವಸ್ಥೆಯೇ ಇರುವುದಿಲ್ಲ.

ಇದನ್ನು ಅರಿತ ಚಾರಣಿಗರ ಗುಂಪೊಂದು ವಿಶಿಷ್ಟ ಸಾಹಸ ಮಾಡಿದೆ. ಲಡಾಕ್ ನಲ್ಲಿರುವ 1000 ವರ್ಷ ಹಳೆಯದಾದ ಶೇಡ್ ಎಂಬ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬರೋಬ್ಬರಿ 300 ಕಿಮೀ ಚಾರಣ ಮಾಡಿದೆ. ಇದಕ್ಕಾಗಿ ವಿಶ್ವದ ಬೇರೆ ಬೇರೆ ದೇಶಗಳ ಚಾರಣಿಗರು ಒಂದಾಗಿದ್ದಾರೆ.

ಬೆಟ್ಟ, ಗುಡ್ಡಗಳನ್ನೆಲ್ಲ ದಾಟಿಕೊಂಡು ಕಡಿದಾದ ಹಾದಿಯಲ್ಲಿ ಸಾಗಿ ಬಂದ ಚಾರಣಿಗರು ಎರಡು ದಿನಗಳ ಕಾಲ ಗ್ರಾಮದಲ್ಲಿ ತಂಗಿದ್ದರು. ಗ್ರಾಮಸ್ಥರಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಲು 5 ಸೋಲಾರ್ ಮೈಕ್ರೋ ಗ್ರಿಡ್ ಗಳನ್ನು ಅಳವಡಿಸಿದ್ದಾರೆ.

‘ಗ್ಲೋಬಲ್ ಹಿಮಾಲಯನ್ ಎಕ್ಸ್ ಪೆಡಿಶನ್’ ಇದನ್ನು ತಯಾರಿಸಿದೆ. ಈ ಸಂಸ್ಥೆ ಸುಮಾರು 52 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ. 20,000 ಜನರ ಬದುಕನ್ನೇ ಬದಲಾಯಿಸಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...