alex Certify
ಕನ್ನಡ ದುನಿಯಾ       Mobile App
       

Kannada Duniya

ತೂಕದ ಮಹಿಳೆಯನ್ನು ಮಗುವಿನಂತೆ ಉಪಚರಿಸಿದ ವೈದ್ಯರ ಮೇಲೆ ಅಪವಾದ

590447-eman-ahmed

ವಿಶ್ವದ ಅತ್ಯಂತ ತೂಕದ ಮಹಿಳೆ ಎನಿಸಿಕೊಂಡಿದ್ದ ಈಜಿಪ್ಟ್ ನ ಎಮನ್ ಅಹ್ಮದ್ ಗೆ ಚಿಕಿತ್ಸೆ ನೀಡಿರುವ ವೈದ್ಯರು ತಮ್ಮ ಮೇಲೆ ಸುಖಾಸುಮ್ಮನೆ ಅಪವಾದ ಮಾಡಿರೋದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಒಳ್ಳೆ ಕೆಲಸ ಮಾಡಿದ್ದಕ್ಕೆ ತಮ್ಮ ಮೇಲೆ ಈ ರೀತಿ ಆರೋಪ ಬಂದಿದೆ ಅಂತಾ ನೊಂದು ನುಡಿದಿದ್ದಾರೆ. ಎಮನ್  ಸುಮಾರು 3 ತಿಂಗಳುಗಳಿಂದ ಭಾರತದಲ್ಲಿದ್ದಾಳೆ. ತೂಕ ಇಳಿಸಲು ಆಕೆ ಮುಂಬೈನ ಸೈಫಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆದಿದ್ದಾಳೆ. ಮೂರು ತಿಂಗಳ ಚಿಕಿತ್ಸೆ ಬಳಿಕ ಎಮನ್ 378 ಕೆಜಿ ತೂಕ ಕಳೆದುಕೊಂಡಿದ್ದು, ಸದ್ಯದಲ್ಲೇ ಆಕೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವುದಾಗಿ ವೈದ್ಯರು ತಿಳಿಸಿದ್ರು.

ಆದ್ರೆ ಎಮನ್ ಸಹೋದರಿ ಶೈಮಾ, ಆನ್ ಲೈನ್ ನಲ್ಲಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ಲು. ಎಮನ್ ಗೆ ಚಿಕಿತ್ಸೆ ನೀಡುತ್ತಿರುವ ಡಾ.ಮುಫಜಲ್, ಆಕೆಯ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ನೀಡ್ತಿದ್ದಾರೆ ಅಂತಾ ಆರೋಪಿಸಿದ್ಲು. ಎಮನ್ ತಾಯಿ ಕೂಡ ಡಾ.ಮುಫಜಲ್, ಸುಳ್ಳು ಭರವಸೆ ನೀಡಿ ಎಮನ್ ಳನ್ನು ಮುಂಬೈಗೆ ಕರೆಸಿಕೊಂಡು ತಾವು ಪಬ್ಲಿಸಿಟಿ ಪಡೆಯುತ್ತಿದ್ದಾರೆ ಅಂತೆಲ್ಲಾ ದೂರಿದ್ಲು.

ಆದ್ರೆ ಈ ಆರೋಪಗಳನ್ನೆಲ್ಲ ನಿರಾಕರಿಸಿದ್ದ ಡಾ.ಮುಫಜಲ್, ಎಮನ್ ಚೇತರಿಸಿಕೊಂಡಿದ್ದು ಆಕೆಯನ್ನು ಈಜಿಪ್ಟ್ ಗೆ ಕರೆದೊಯ್ಯಲು ಇಷ್ಟವಿಲ್ಲದೆ ಕುಟುಂಬದವರು ಈ ರೀತಿ ಆರೋಪ ಮಾಡುತ್ತಿದ್ದಾರೆಂದು ಸ್ಪಷ್ಟಪಡಿಸಿದ್ರು. ಇದರ ಬೆನ್ನಲ್ಲೇ ಹೆಚ್ಚಿನ ಚಿಕಿತ್ಸೆಗಾಗಿ ಎಮನ್ ಳನ್ನು ಅಬುಧಾಬಿಗೆ ಶಿಫ್ಟ್ ಮಾಡೋದಾಗಿ ಸೈಫಿ ಆಸ್ಪತ್ರೆ ಹೇಳಿದೆ.

ಎಮನ್ ಸಹೋದರಿ ಮಾಡಿರೋ ಆರೋಪದಿಂದ ನೊಂದಿರುವ ಡಾ.ಮುಫಜಲ್ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಮುಂಬೈಗೆ ಬಂದಾಗ 500 ಕೆಜಿಗೂ ಅಧಿಕ ತೂಕವಿದ್ದ ಎಮನ್ ಈಗ 176 ಕೆಜಿಯಾಗಿದ್ದಾಳೆ. ಇದನ್ನು ಚೇತರಿಕೆ ಎನ್ನದೇ ಇನ್ನೇನು ಹೇಳಲು ಸಾಧ್ಯ ಅಂತಾ ಪ್ರಶ್ನಿಸಿದ್ದಾರೆ. ನನ್ನ ಸ್ವಂತ ಮಗುವಿನಂತೆ ಆಕೆಗೆ ಚಿಕಿತ್ಸೆ ನೀಡಿದ್ದೇನೆ. ಹಗಲು ರಾತ್ರಿಯೆನ್ನದೇ ಆಕೆಯನ್ನು ಉಪಚರಿಸಿದ್ದೇನೆ, ಇಲ್ಲಿಗೆ ಬಂದ ಸಂದರ್ಭದಲ್ಲಿ ಎಮನ್ ಗೆ ಇದ್ದ ಬಹುತೇಕ ಎಲ್ಲಾ ಆರೋಗ್ಯ ಸಮಸ್ಯೆಗಳೂ ಈಗ ವಾಸಿಯಾಗಿವೆ. ಒಳ್ಳೆಯ ಕೆಲಸ ಮಾಡಿದ್ದಕ್ಕೆ ನನ್ನ ಮೇಲೆ ಅಪವಾದ ಬಂದಿದೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...