alex Certify
ಕನ್ನಡ ದುನಿಯಾ       Mobile App
       

Kannada Duniya

ಶಬರಿಮಲೆ ಅಯ್ಯಪ್ಪನ ಭಕ್ತರಿಗೆ ಸಿಹಿ ಸುದ್ದಿ

sabarimle-ddd

ತಿರುವನಂತಪುರಂ: ಕೇರಳದ ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಲಕ್ಷಾಂತರ ಭಕ್ತರು ಭೇಟಿ ಕೊಡುತ್ತಾರೆ.

ಹೀಗೆ ಬರುವ ಭಕ್ತರ ಪ್ರಯಾಣವನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಕೇರಳ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸಭೆಯಲ್ಲಿ ಶಬರಿಮಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ.

ಕೊಟ್ಟಾಯಂ ಜಿಲ್ಲೆಯ ಕಂಜರಿಪಾಳ್ಯ ತಾಲ್ಲೂಕಿನ ಎರುಮಲೆ ಹರಿಸನ್ಸ್ ಪ್ಲಾಂಟೇಷನ್ ನ ಚೆರುವ್ಯಾಲಿ ಎಸ್ಟೇಟ್ ನಲ್ಲಿ ಶಬರಿಮಲೆನಿಂದ 48 ಕಿಲೋಮೀಟರ್ ದೂರದಲ್ಲಿ 2263 ಎಕರೆ ಎಕರೆ ಪ್ರದೇಶದಲ್ಲಿ ಏರ್ ಪೋರ್ಟ್ ನಿರ್ಮಿಸಲಾಗುವುದು.

ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ದೇಶ, ವಿದೇಶಗಳಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತರು ಬರುತ್ತಾರೆ. ರಸ್ತೆ ಮಾರ್ಗದ ಮೂಲಕವೇ ಬಂದು ಹೋಗುತ್ತಿದ್ದ ಭಕ್ತರ ಪ್ರಯಾಣ ಇನ್ನು ಸುಲಭವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...