alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಲ್ಲಿ ವಿತರಿಸುವ ಆಹಾರಕ್ಕೆ ದರ ನಿಗದಿ

tea

ರೈಲಿನಲ್ಲಿ ಊಟಕ್ಕೆ ನೀವು ಎಷ್ಟು ಹಣ ಕೊಡ್ತಿದ್ದೀರಾ? ವೆಜ್ ಥಾಲಿಗೆ 50 ರೂಪಾಯಿಗಿಂತ ಹೆಚ್ಚು ಚಾರ್ಜ್ ಮಾಡ್ತಿದ್ದಾರಾ? ಆದ್ರೆ ಇನ್ಮೇಲೆ ನೀವು ಹೆಚ್ಚು ಹಣ ಕೊಡುವ ಪ್ರಮೇಯವೇ ಇಲ್ಲ, ಅವರು ಕೇಳುವಂತೆಯೂ ಇಲ್ಲ. ಯಾಕಂದ್ರೆ ರೈಲಿನಲ್ಲಿ ಮಾರುವ ಊಟ, ಚಹಾ, ಮತ್ತು ನೀರಿನ ಬಾಟಲಿಗಳಿಗೆ ರೈಲ್ವೆ ಇಲಾಖೆ ನಿರ್ದಿಷ್ಟ ದರವನ್ನು ನಿಗದಿ ಮಾಡಿದೆ.

ಚಹಾ ಮತ್ತು ಕಾಫಿಗೆ 7 ರೂಪಾಯಿ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 50-55 ರೂಪಾಯಿ ನಿಗದಿ ಮಾಡಲಾಗಿದೆ. ಹೊಸ ದರದ ಪಟ್ಟಿಯನ್ನು ರೈಲ್ವೆ ಇಲಾಖೆ ಟ್ವಿಟ್ಟರ್ ನಲ್ಲಿ ಪ್ರಕಟಿಸಿದೆ. ಅಕಸ್ಮಾತ್ ಯಾರಾದರೂ ಹೆಚ್ಚು ಹಣ ಪಡೆದಿದ್ರೆ ನೀವು @Railminindia ಮೂಲಕ ದೂರು ನೀಡಬಹುದು.

ರೈಲಿನಲ್ಲಿ ಖಾಸಗಿ ವೆಂಡರ್ ಗಳು ವಿತರಿಸುವ ಆಹಾರದ ಗುಣಮಟ್ಟ ಹಾಗೂ ಬೆಲೆಯ ಬಗ್ಗೆ ಸಾಕಷ್ಟು ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ನಿಯಮದ ಪ್ರಕಾರ ವೆಂಡರ್ ಗಳು ಪ್ರಯಾಣಿಕರಿಗೆ ಮೆನು ಕಾರ್ಡ್ ತೋರಿಸಿ, ಬೇಕಾದ ತಿನಿಸನ್ನು ಪೂರೈಸಬೇಕು. ಅವುಗಳ ಗುಣಮಟ್ಟ ಚೆನ್ನಾಗಿರಬೇಕು. ಆದ್ರೆ ವೆಂಡರ್ ಗಳು ಮಾತ್ರ ಕಳಪೆ ಆಹಾರ ನೀಡಿ ಮೋಸ ಮಾಡುತ್ತಿದ್ದರು.

ಪ್ರಯಾಣಿಕರಿಗೆ ಸ್ವಚ್ಛ ಮತ್ತು ಗುಣಮಟ್ಟದ ಆಹಾರವನ್ನು ಪೂರೈಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಈ ಜವಾಬ್ಧಾರಿಯನ್ನು ಹೊತ್ತುಕೊಳ್ಳುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ರೈಲು ನಿಲ್ದಾಣಗಳಲ್ಲೇ ಆಹಾರ ತಯಾರಿಸಲು ಯೋಜನೆ ರೂಪಿಸಲಾಗಿದೆ. ರೈಲುಗಳಲ್ಲಿ ತಿಂಡಿ-ತಿನಿಸುಗಳ ವಿತರಣೆ ಹೊಣೆಯನ್ನು ಕೂಡ ಐ ಆರ್ ಸಿ ಟಿ ಸಿ ಹೊತ್ತುಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...