alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ಪ್ರಯಾಣಕ್ಕೆ ಆದ್ಯತೆ ನೀಡಲು ಇದಂತೆ ಕಾರಣ

bus-journeyಪ್ರಯಾಣದ ಅವಧಿ 5-12 ಗಂಟೆಗಳಿದ್ರೆ ಬಹುತೇಕ ಎಲ್ಲರೂ ಬಸ್ ಜರ್ನಿಯನ್ನೇ ಆಯ್ಕೆ ಮಾಡಿಕೊಳ್ತಾರೆ. ಬೆಂಗಳೂರು, ಚೆನ್ನೈ, ಹೈದ್ರಾಬಾದ್, ಪುಣೆ, ದೆಹಲಿ, ಮುಂಬೈ ಎಲ್ಲಾ ಕಡೆಗಳಲ್ಲೂ ಪ್ರಯಾಣಿಕರ ಮೊದಲ ಆಯ್ಕೆ ಬಸ್.

ಆನ್ ಲೈನ್ ಬಸ್ ಬುಕ್ಕಿಂಗ್ ವೇದಿಕೆ Travelyaari 500 ಪ್ರಯಾಣಿಕರ ಸಮೀಕ್ಷೆ ನಡೆಸಿ ಈ ವಿಚಾರವನ್ನು ಬಹಿರಂಗಪಡಿಸಿದೆ. ಪ್ರಯಾಣದ ಸಮಯ 5-12 ಗಂಟೆಗಳಷ್ಟಿದ್ರೆ ಭಾರತದ ಶೇ.76 ರಷ್ಟು ಪ್ರಯಾಣಿಕರು ಬಸ್ ಸಾರಿಗೆಯನ್ನೇ ಅವಲಂಬಿಸುತ್ತಾರೆ. ಇವರಲ್ಲಿ ಶೇ. 40ರಷ್ಟು ಮಂದಿ, ಒಬ್ಬ ಅಥವಾ ಇಬ್ಬರು ಮಕ್ಕಳಿರುವ ಕುಟುಂಬದಿಂದ ಬಂದಿರುತ್ತಾರೆ.

ಜನರು ಹೆಚ್ಚಾಗಿ ಬಸ್ ಗಳನ್ನೇ ನೆಚ್ಚಿಕೊಳ್ಳಲು ಕಾರಣ ಹೆಚ್ಚುವರಿ ಇನ್ಸೆಂಟಿವ್ ಗಳು. ಸಾಮಾನ್ಯ ಡಿಸ್ಕೌಂಟ್ ಹೊರತಾಗಿ ಶೇ.57 ರಷ್ಟು ಪ್ರಯಾಣಿಕರು ‘ಸುಲಭವಾದ ಬಳಕೆ’ ಎಂಬ ಹೆಸರಿನ ಕೊಡುಗೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ರಾತ್ರಿ ಪ್ರಯಾಣಕ್ಕೆ ಬಸ್ ಆರಾಮದಾಯಕ ಎಂಬುದು ಬಹುತೇಕರ ಅಭಿಪ್ರಾಯ. ಶೇ.52ರಷ್ಟು ಮಂದಿ ಪ್ರಯಾಣದುದ್ದಕ್ಕೂ ಟಿವಿ ಮತ್ತು ಸಿನಿಮಾ ನೋಡುತ್ತ ರಿಲ್ಯಾಕ್ಸ್ ಆಗಲು ಬಯಸುತ್ತಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...