alex Certify
ಕನ್ನಡ ದುನಿಯಾ       Mobile App
       

Kannada Duniya

3000 ಕಿ.ಮೀ. ತಡೆಗೋಡೆ ನಿರ್ಮಿಸಲಿದೆ ರೈಲ್ವೆ, ಏಕೆ ಗೊತ್ತಾ…?

60 ಜನರ ಸಾವಿಗೆ ಕಾರಣವಾದ ಅಮೃತಸರ ಭೀಕರ ರೈಲ್ವೆ ಅಪಘಾತದ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ, ಜನ ವಸತಿ ಪ್ರದೇಶದಲ್ಲಿ ಅವಘಡ ಮರುಕಳಿಸದಂತೆ ಮಾಡಲು ರೈಲ್ವೆ ಹಳಿಯ ಪಕ್ಕದಲ್ಲಿ ಮೂರು ಸಾವಿರ ಕಿಲೋಮೀಟರ್ ನಷ್ಟು ತಡೆ ಗೋಡೆ ನಿರ್ಮಿಸಲು ನಿರ್ಧರಿಸಿದೆ.

ರೈಲ್ವೆ ಸಚಿವ ಪಿಯೂಷ್ ಗೋಯಲ್ ಈ ನಿರ್ಧಾರ ತೆಗೆದುಕೊಂಡಿದ್ದು, ಅದರ ಅನುಷ್ಠಾನ ಕಾರ್ಯಕ್ಕೆ ಇನ್ನಷ್ಟೇ ಚಾಲನೆ ಸಿಗಬೇಕಿದೆ.

2.7 ಮೀಟರ್ ಎತ್ತರದ ತಡೆ ಗೋಡೆಯನ್ನು ಸಿಮೆಂಟ್ ಕಾಂಕ್ರಿಟ್ ನಿಂದ ನಿರ್ಮಿಸಲು ಉದ್ದೇಶಿಸಲಾಗಿದೆ. ಸಬ್ ಅರ್ಬನ್ ನಗರ ಹಾಗೂ ನಾನ್ ಸಬ್ ಅರ್ಬನ್ ನಗರಗಳಲ್ಲಿ ಇವು ನಿರ್ಮಾಣವಾಗಲಿದ್ದು, ಅಂದಾಜು 2500 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...