alex Certify
ಕನ್ನಡ ದುನಿಯಾ       Mobile App
       

Kannada Duniya

ಇದನ್ನು ಧರಿಸಬಾರದಂತೆ ಮಂಗಳಮುಖಿಯರು..!

ram-ssdfg

ಹೈದರಾಬಾದ್: ಹಲವು ಹೇಳಿಕೆಗಳ ಮೂಲಕ ವಿವಾದ ಮೂಡಿಸಿದ್ದ ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಖಾತೆ ಸಚಿವ ರಾಮದಾಸ್ ಅಠಾವಳೆ ಮತ್ತೊಂದು ಹೇಳಿಕೆ ನೀಡಿದ್ದಾರೆ.

ಮಂಗಳಮುಖಿಯರು ಸೀರೆಯನ್ನು ಧರಿಸಬಾರದು ಎಂದು ಹೇಳಿದ್ದಾರೆ. ಮಂಗಳಮುಖಿಯರು ಗಂಡಸರೂ ಅಲ್ಲ, ಹೆಂಗಸರೂ ಅಲ್ಲ, ಅವರು ಸೀರೆ ಧರಿಸಬಾರದು ಎಂದಿದ್ದಾರೆ.

ಮಂಗಳಮುಖಿಯರು ನಮ್ಮಂತೆಯೇ ಮನುಷ್ಯರು. ಅವರು ಸೀರೆಯ ಬದಲಿಗೆ ಪುರುಷರ ರೀತಿಯಲ್ಲಿ ಪ್ಯಾಂಟ್, ಶರ್ಟ್ ಧರಿಸಲಿ ಎಂದು ಸಲಹೆ ನೀಡಿದ್ದಾರೆ.

ಭಾರತದಲ್ಲಿ ಸುಮಾರು 6 ಲಕ್ಷದಷ್ಟು ಮಂಗಳಮುಖಿಯರಿದ್ದು, ಅವರ ಹಕ್ಕುಗಳು ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಮಸೂದೆಯನ್ನು ತರಲಾಗುವುದು. ಮುಂದಿನ ಲೋಕಸಭೆ ಅಧಿವೇಶನದಲ್ಲಿ ತೃತೀಯ ಲಿಂಗಿಗಳ ಮಸೂದೆ ತರುವ ಚಿಂತನೆ ಇದೆ ಎಂದಿದ್ದಾರೆ.

ಮಂಗಳಮುಖಿಯರಿಗಾಗಿಯೇ ವಿಶೇಷ ಶಾಲೆ ಆರಂಭಿಸುವ ಚಿಂತನೆ ಇದೆ. ಇದರಿಂದ ಅವರಿಗೆ ಆಗುವ ತೊಂದರೆಯನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಇದೇ ರೀತಿ ವಂದೇ ಮಾತರಂ ಮತ್ತು ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ ಸೋತಿದ್ದ ಬಗ್ಗೆ ಅವರು ವಿವಾದಿತ ಹೇಳಿಕೆ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...