alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲ್ ನಲ್ಲಿ ತೃತೀಯ ಲಿಂಗಿ ಮಹಿಳೆಗೆ ನೋ ಎಂಟ್ರಿ

ಪುಣೆಯ ಮಾಲ್ ಒಂದರಲ್ಲಿ ತೃತೀಯ ಲಿಂಗಿ ಅನ್ನೋ ಕಾರಣಕ್ಕೆ ಪ್ರವೇಶ ನಿರಾಕರಿಸಲಾಗಿದೆ ಅಂತಾ ಸೋನಾಲಿ ದಾಲ್ವಿ ಎಂಬಾಕೆ ಆರೋಪ ಮಾಡಿದ್ದಾಳೆ. ವಿಮಾನ್ ನಗರದಲ್ಲಿರೋ ಫಿಯೋನಿಕ್ಸ್ ಮಾರ್ಕೆಟ್ ಸಿಟಿ ಮಾಲ್ ವಿರುದ್ಧ ಕಾನೂನು ಹೋರಾಟ ನಡೆಸಲು ಸೋನಾಲಿ ನಿರ್ಧರಿಸಿದ್ದಾಳೆ.

ಗುರುವಾರ ಸಂಜೆ 8 ಗಂಟೆ ವೇಳೆಗೆ ಸ್ನೇಹಿತ ಮನೋಜ್ ನೊಂದಿಗೆ ಸೋನಾಲಿ ಮಾಲ್ ಗೆ ಬಂದಿದ್ದಳಂತೆ. ಆದ್ರೆ ಗೇಟ್ ನಂಬರ್ 5ರಲ್ಲಿದ್ದ ಮಹಿಳಾ ಭದ್ರತಾ ಸಿಬ್ಬಂದಿ, ಸೋನಾಲಿಯ ಬ್ಯಾಗ್ ಚೆಕ್ ಮಾಡಲು ನಿರಾಕರಿಸಿದ್ದಾಳೆ. ತೃತೀಯ ಲಿಂಗಿಗಳಿಗೆ ಮಾಲ್ ಪ್ರವೇಶಿಸಲು ಅವಕಾಶವಿಲ್ಲ ಅಂತಾ ಹೇಳಿದ್ದಾಳೆ.

ಬಳಿಕ ಸೋನಾಲಿ ಇನ್ನೊಂದು ಗೇಟ್ ಮೂಲಕ ಪ್ರವೇಶಿಸಲು ಮುಂದಾದ್ಲು. ಅಲ್ಲಿಯೂ ಪ್ರವೇಶ ನಿರಾಕರಿಸಲಾಯ್ತು. ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಸೋನಾಲಿಗೆ ಒಳಹೋಗಲು ಅವಕಾಶ ಕೊಡುವಂತೆ ಮನವಿ ಮಾಡಿದ್ರು. ಆದ್ರೂ ಮಾಲ್ ಸಿಬ್ಬಂದಿ ಒಪ್ಪಲೇ ಇಲ್ಲ. ಹಾಗಾಗಿ ಈ ತಾರತಮ್ಯವನ್ನು ಖಂಡಿಸಿ ಕೇಸ್ ದಾಖಲಿಸುವುದಾಗಿ ಸೋನಾಲಿ ಹೇಳಿದ್ದಾಳೆ. ಮಾಲ್ ನಲ್ಲಿ ನಡೆದ ಈ ಘಟನೆಯ ವಿಡಿಯೋ ಕೂಡ ವೈರಲ್ ಆಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...