alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರ ಅತ್ಯಾಚಾರ ತಡೆಗೆ ಸಿದ್ಧವಾಗ್ತಿದ್ದಾರೆ ಟ್ರಾನ್ಸ್ಜಂಡರ್ ಭದ್ರತಾ ಸಿಬ್ಬಂದಿ

ಬಿಹಾರದಲ್ಲಿ ನಿರ್ಗತಿಕ ಮಹಿಳೆಯರ ರಕ್ಷಣೆಗೆ ನಿರ್ಮಿಸಲಾಗಿದ್ದ ಆಶ್ರಯ ಮನೆಯಲ್ಲೇ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಆಶ್ರಯ ಮನೆಯಲ್ಲಿ ನಿರ್ಗತಿಕ ಮಹಿಳೆಯರ ಮೇಲಾಗ್ತಿರುವ ಅತ್ಯಾಚಾರ ತಡೆಗೆ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಇನ್ಮುಂದೆ ನಿರ್ಗತಿಕ ಮಹಿಳೆಯರ ಆಶ್ರಯ ಮನೆಯಲ್ಲಿ ಟ್ರಾನ್ಸ್ಜಂಡರ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಲಿದ್ದಾರೆ.

ವಿಭಿನ್ನ ಕಾರಣಕ್ಕೆ ಮನೆಯಿಂದ ಹೊರ ಬಂದಿರುವ ಮಹಿಳೆಯರು ಹಾಗೂ ಹುಡುಗಿಯರ ರಕ್ಷಣೆಗಾಗಿ ಬಿಹಾರ ಸರ್ಕಾರ ಆಶ್ರಯ ಮನೆ ನಿರ್ಮಾಣ ಮಾಡಿದೆ. ಕೆಲ ದಿನಗಳ ಹಿಂದೆ ಮುಜಾಫರ್ನಗರದಲ್ಲಿ ನಿರ್ಗತಿಕ ಮಹಿಳೆಯರ ಆಶ್ರಯ ಮನೆಯಲ್ಲಿ ದೇಹ ವ್ಯಾಪಾರದ ಪ್ರಕರಣ ಬೆಳಕಿಗೆ ಬಂದಿತ್ತು. ಘಟನೆಯಲ್ಲಿ 10 ಮಂದಿಯನ್ನು ಬಂಧಿಸಲಾಗಿತ್ತು.

ಇದಾದ ನಂತ್ರ ಛಪ್ರಾದ ಆಶ್ರಯ ಮನೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದಿತ್ತು. ಘಟನೆಯಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಸರ್ಕಾರದ ಆಶ್ರಯ ಮನೆಯಲ್ಲಿಯೇ ರಕ್ಷಣೆಯಿಲ್ಲ ಎಂಬ ಆರೋಪ ಕೇಳಿ ಬರ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...