alex Certify
ಕನ್ನಡ ದುನಿಯಾ       Mobile App
       

Kannada Duniya

ಬರಡು ಭೂಮಿಯನ್ನು ಕಾಡನ್ನಾಗಿಸಿದ ವಿದೇಶಿಗ

aviram-rozin-7-filling-the-bottle-for-wick-irrigation-with-aviram_1454829866

ಭಾರತದಲ್ಲಿ ದಿನೇ ದಿನೇ ಕಾಡು ಬರಿದಾಗುತ್ತಿದ್ದು, ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ. ಮಾನವನ ದುರಾಸೆಗೆ ಅರಣ್ಯ ಪ್ರದೇಶ ಬೋಳಾಗುತ್ತಿದೆ. ಇಂತ ಸಂದರ್ಭದಲ್ಲಿ ವಿದೇಶಿ ಪ್ರಜೆಯೊಬ್ಬರು ಭಾರತದಲ್ಲಿ ಕಾಡು ಬೆಳೆಸಲು ಮುಂದಾಗಿ ಅದರಲ್ಲಿ ಸಫಲರೂ ಆಗಿದ್ದಾರೆ.

ಹೌದು. ಇಸ್ರೇಲ್ ದೇಶದ ಅವ್ರಿಮ್ ರೋಜಿನ್ ಎಂಬವರು 2000 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಇಲ್ಲಿನ ಅರಣ್ಯ ಪ್ರದೇಶ ಬರಿದಾಗುತ್ತಿರುವುದನ್ನು ಕಂಡ ಅವರು, ಕಾಡು ಬೆಳೆಸುವ ಚಿಂತನೆ ಮಾಡಿದರಲ್ಲದೇ ಅದಕ್ಕಾಗಿ ಯೋಜನೆಯೊಂದನ್ನೂ ಸಿದ್ದಪಡಿಸಿಕೊಂಡರು.

2003 ರಲ್ಲಿ ತಮ್ಮ ಹುದ್ದೆ ತೊರೆದು ಪತ್ನಿ ಯೊರಿಟ್ ಹಾಗೂ ಪುತ್ರಿ ಓಶರ್ ಜೊತೆ ಭಾರತಕ್ಕೆ ಬಂದ ಅವ್ರಿಮ್ ರೋಜಿನ್, ತಮಿಳುನಾಡಿವ ಅರೋಲಿ ಬಳಿ 70 ಎಕರೆ ಬರಡು ಭೂಮಿಯನ್ನು ಖರೀದಿಸಿದ್ದು, ಅಲ್ಲಿ ಸಸ್ಯಗಳನ್ನು ನೆಡಲು ಆರಂಭಿಸಿದರು. ಅವ್ರಿಮ್ ರೋಜಿನ್ ಅವರ ಸದುದ್ದೇಶ ಅರಿತ ಆನೇಕ ಸಂಘ- ಸಂಸ್ಥೆಗಳು ಅವರೊಂದಿಗೆ ಕೈ ಜೋಡಿಸಿದವು. ಇಂದು ಆ ಪ್ರದೇಶ ದಟ್ಟ ಅರಣ್ಯ ಪ್ರದೇಶವಾಗಿ ಮಾರ್ಪಾಟಿದ್ದು, ತಮ್ಮ ಶ್ರಮ ಸಾರ್ಥಕವಾಗಿದ್ದಕ್ಕೆ ಅವ್ರಿಮ್ ರೋಜಿನ್ ಸಂತಸಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...