alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಪತಿಗಳ ಬಳಿ ದಯಾಮರಣ ಕೇಳ್ತಿದ್ದಾಳೆ ತೃತೀಯ ಲಿಂಗಿ ಮಹಿಳೆ

ತೃತೀಯ ಲಿಂಗಿ ಮಹಿಳೆಯೊಬ್ಬಳು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾಳೆ. ಆಕೆ ತೃತೀಯ ಲಿಂಗಿ ಅನ್ನೋ ಕಾರಣಕ್ಕೆ ಏರ್ ಇಂಡಿಯಾದಲ್ಲಿ ಉದ್ಯೋಗ ನೀಡಲು ನಿರಾಕರಿಸಲಾಗಿದೆಯಂತೆ. ಇದರಿಂದ ನೊಂದಿರುವ ಶಾನವಿ ಪೊನ್ನುಸ್ವಾಮಿ, ತನಗೆ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಿ ಅಂತಾ ಕೇಳಿದ್ದಾಳೆ.

ಉದ್ಯೋಗಕ್ಕೆ ಬೇಕಾದ ಅನುಭವ ಹಾಗೂ ಶೈಕ್ಷಣಿಕ ಅರ್ಹತೆ ತನಗಿದೆ. ಆದ್ರೆ ತೃತೀಯ ಲಿಂಗಿ ಅನ್ನೋ ಕಾರಣಕ್ಕೆ ಉದ್ಯೋಗ ನೀಡುತ್ತಿಲ್ಲ ಅನ್ನೋದು ಶಾನವಿ ಆರೋಪ. ತಾನು ತೃತೀಯ ಲಿಂಗಿ ಅನ್ನೋ ಕಾರಣಕ್ಕೆ ತೆರಿಗೆಯಲ್ಲಿ ರಿಯಾಯಿತಿಯೇನೂ ಸಿಕ್ತಿಲ್ಲ, ಹಾಗಿದ್ಮೇಲೆ ಉದ್ಯೋಗದಲ್ಯಾಕೆ ಅನ್ನೋದು ಅವಳ ಪ್ರಶ್ನೆ.

ತನ್ನ ಸಾವು-ಬದುಕು ರಾಷ್ಟ್ರಪತಿಗಳ ಕೈಯಲ್ಲಿದೆ ಎನ್ನುತ್ತಿದ್ದಾಳೆ. ಸರ್ಕಾರಿ ವಿಮಾನಯಾನ ಸಂಸ್ಥೆಯೇ ಕೆಲಸ ಕೊಡಲು ನಿರಾಕರಿಸಿದ ಮೇಲೆ ಬೇರೆ ವಿಮಾನಯಾನ ಸಂಸ್ಥೆಗಳಲ್ಲಿ ಪ್ರಯತ್ನಿಸುವುದರಲ್ಲಿ ಅರ್ಥವೇ ಇಲ್ಲ ಅಂತಾ ಹೇಳಿದ್ದಾಳೆ.

ತಮಿಳುನಾಡು ಮೂಲದ ಶಾನವಿ ಎಂಜಿನಿಯರಿಂಗ್ ಪದವೀಧರೆ. ಮಾಡೆಲ್ ಹಾಗೂ ನಟಿಯೂ ಹೌದು. ವಿಮಾನಯಾನ ಕಂಪನಿಯೊಂದರ ಕಸ್ಟಮರ್ ಸಪೋರ್ಟ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವೂ ಅವಳಿಗಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...