alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಹೆಚ್ಚಳವಾಗಲಿದೆ ರೈಲುಗಳ ವೇಗ

ಭಾರತದ ಅತಿದೊಡ್ಡ ಸಂಚಾರ ವ್ಯವಸ್ಥೆಯಾಗಿರುವ ರೈಲ್ವೇ ಇಲಾಖೆ 2021-22 ರ ವೇಳೆಗೆ ರೈಲು‌ ಸಂಚಾರದ ವೇಗವನ್ನು‌ ಶೇ.10-15 ರಷ್ಟು ಏರಿಸಬಹುದು ಎಂದು‌ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ದೇಶದೆಲ್ಲೆಡೆ‌ ಎಲೆಕ್ಟ್ರಿಕ್ ಲೇನ್ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಒಂದು ವೇಳೆ ದೇಶದೆಲ್ಲೆಡೆ‌ ಎಲೆಕ್ಟ್ರಿಕ್ ಲೇನ್ ಹಾಕಿದರೆ, ವೇಗ ಹೆಚ್ಚಿಸಿಕೊಳ್ಳಬಹುದು. ಡಿಸೇಲ್‌ ಇಂಜಿನ್ ಗಳಿಗಿಂತ ಎಲೆಕ್ಟ್ರಿಕ್ ಎಂಜಿನ್‌ ವೇಗವಾಗಿ‌ ಚಲಿಸುತ್ತವೆ ಹಾಗೂ ಕಡಿಮೆ‌‌ ಮಾಲಿನ್ಯ‌ ಸೃಷ್ಟಿಸುತ್ತದೆ ಎಂದು‌ ರೈಲ್ವೆ ‌ಬೋರ್ಡ್ ನಿಗಮದ ಸದಸ್ಯ ಜ್ಞಾನಶ್ಯಾಂ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ದೇಶದಲ್ಲಿ 29 ಸಾವಿರ‌ ಕಿ.ಮೀ‌. ಎಲೆಕ್ಟ್ರಿಕ್ ಲೇನ್ ನಿರ್ಮಾಣಕ್ಕೆ‌ ಸಿದ್ಧತೆ ನಡೆಸಿಕೊಳ್ಳಲಾಗಿದ್ದು,‌ 13 ಸಾವಿರ‌ ಕಿ.ಮೀ‌. ಒಪ್ಪಿಗೆ ದೊರೆತಿದೆ. ಆದ್ದರಿಂದ‌‌ ಮುಂದಿನ ಮೂರು ವರ್ಷದಲ್ಲಿ ಎಲೆಕ್ಟ್ರಿಕ್ ಲೇನ್ ಗಳು‌ ಹೆಚ್ಚಾಗುವುದರಿಂದ‌ ರೈಲಿನ ವೇಗ‌ ಹೆಚ್ಚಾಗಲಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...