alex Certify
ಕನ್ನಡ ದುನಿಯಾ       Mobile App
       

Kannada Duniya

ಗಡಿಬಿಡಿ ಸ್ವಭಾವದವರು ನೀವಾಗಿದ್ದರೆ ಇದನ್ನೊಮ್ಮೆ ನೋಡಿ

ಕೆಲವರಿಗೆ ಕೊಂಚವೂ ಸಮಾಧಾನವಿರುವುದಿಲ್ಲ. ಅದು ಟ್ರಾಫಿಕ್ ನಲ್ಲಾಗಿರಬಹುದು ಅಥವಾ ರೈಲು ಹಳಿ ದಾಟುವ ಸಂದರ್ಭವಿರಬಹುದು. ಕ್ಷಣ ಕಾಲ ಕಾದು ಹೋದರೆ ಪ್ರಪಂಚವೇನೂ ಮುಳುಗಿ ಹೋಗುವುದಿಲ್ಲ ಅಥವಾ ಶಾರ್ಟ್ ಕಟ್ ಬಳಸಿ ಇವರು ಹೋಗಿ ಯಾವ ದೊಡ್ಡ ಘನಂದಾರಿ ಕಾರ್ಯ ಮಾಡಿರುವುದಿಲ್ಲ. ಆದರೂ ಅವಸರ.

ವೇಗವಾಗಿ ಎಕ್ಸ್ ಪ್ರೆಸ್ ರೈಲು ಬರುತ್ತಿರುವುದನ್ನು ಗಮನಿಸಿದರೂ ಅಷ್ಟರಲ್ಲೇ ದಾಟಿಕೊಂಡು ಬಿಡೋಣಾ ಎಂದು ಹೋದ ಈ ಜೋಡಿ ಕೂದಲೆಳೆಯಲ್ಲಿ ಆಪಾಯದಿಂದ ಪಾರಾಗಿದೆ. ಈ ಘಟನೆಯನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದವರೊಬ್ಬರು ಈ ಹಿಂದೆಯೇ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಾರೆ. ಇದನ್ನು ಸಾವಿರಾರು ಮಂದಿ ಶೇರ್ ಮಾಡಿ ಲಕ್ಷಾಂತರ ಮಂದಿ ಈಗಾಗಲೇ ವೀಕ್ಷಿಸಿದ್ದಾರೆ.

ಆದರೂ ಕೆಲವರ ವರ್ತನೆಯಲ್ಲೇನೂ ಸುಧಾರಣೆಯಾಗಿಲ್ಲ. ಈಗ ಮತ್ತೊಮ್ಮೆ ಈ ವಿಡಿಯೋವನ್ನು ವೀಕ್ಷಿಸಿ. ಇದನ್ನು ನೋಡಿಯಾದರೂ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಅಥವಾ ರೈಲ್ವೇ ಹಳಿ ಕ್ರಾಸ್ ಮಾಡುವ ಮುನ್ನ 10 ಬಾರಿ ಯೋಚಿಸಿ ಮುಂದುವರೆಯಿರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...