alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆಯಿಂದ ರೈಲು ಪ್ರಯಾಣವೂ ದುಬಾರಿ

TRAINಬಡ ಹಾಗೂ ಮಧ್ಯಮ ವರ್ಗದವರ ಜೀವನಾಡಿಯಾಗಿದ್ದ ರೈಲು ಪ್ರಯಾಣ ಕೂಡ ನಾಳೆಯಿಂದ ಭಾರೀ ದುಬಾರಿಯಾಗಲಿದೆ. ಯಾಕಂದ್ರೆ ಭಾರತೀಯ ರೈಲ್ವೆ ಇಲಾಖೆ ಕ್ರಿಯಾತ್ಮಕ ಪ್ರಯಾಣ ದರ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.

ರಾಜಧಾನಿ, ಶತಾಬ್ಧಿ ಎಕ್ಸ್ ಪ್ರೆಸ್ ಮತ್ತು ಡುರಂಟೋ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರು ಶೇ.10 ರಿಂದ ಶೇ.50 ರಷ್ಟು ಹೆಚ್ಚು ಹಣ ತೆರಬೇಕಾಗುತ್ತದೆ. ಈ ಮೂರು ರೈಲುಗಳಲ್ಲಿ ಶೇ.10ರಷ್ಟು ಆಸನಗಳನ್ನು ಮೊದಲು ಸಾಮಾನ್ಯ ದರ, ನಂತರದ ಶೇ.10ರಷ್ಟು ಆಸನಗಳಿಗೆ ಶೇ.10ರಷ್ಟು ದರ ಹೆಚ್ಚಳ ಮಾಡಲಾಗುತ್ತದೆ.

ಗರಿಷ್ಠ ಶೇ.50 ರವರೆಗಿನ ಆಸನಗಳಿಗೆ ಮಾತ್ರ ಈ ಏರಿಕೆ ಅನ್ವಯವಾಗಲಿದೆ. ರಾಜಧಾನಿ, ಶತಾಬ್ಧಿ ಮತ್ತು ಡುರಂಟೋ ರೈಲುಗಳ ಸೆಕೆಂಡ್ ಕ್ಲಾಸ್ ಎಸಿ, ಥರ್ಡ್ ಕ್ಲಾಸ್ ಎಸಿ, ಚೇರ್ ಎಸಿ ವಿಭಾಗಗಳಲ್ಲಿ ಕ್ರಿಯಾತ್ಮಕ ಪ್ರಯಾಣ ದರ ಏರಿಕೆ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ಫಸ್ಟ್ ಕ್ಲಾಸ್ ಎಸಿ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಎಸಿ ವಿಭಾಗವನ್ನು ಈ ವ್ಯವಸ್ಥೆಯಿಂದ ಹೊರಗಿಡಲಾಗಿದೆ. 42 ರಾಜಧಾನಿ ಎಕ್ಸ್ ಪ್ರೆಸ್, 54 ಡುರಂಟೋ ರೈಲುಗಳು ಮತ್ತು 46 ಶತಾಬ್ಧಿ ಎಕ್ಸ್ ಪ್ರೆಸ್ ರೈಲುಗಳಿಂದ 500 ಕೋಟಿ ಹೆಚ್ಚುವರಿ ಆದಾಯ ಗಳಿಸಲು ರೈಲ್ವೆ ಇಲಾಖೆ ಈ ಯೋಜನೆ ಹಾಕಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...