alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಗ್ರೇ ಸೂಟ್ ನಲ್ಲಿ ಕಂಗೊಳಿಸಲಿದ್ದಾರೆ ಟಿಟಿಇ

ರೈಲ್ವೇಗೆ ಕಾಯಕಲ್ಪ ಕೊಡಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಇಲಾಖೆ ಈಗ ರೈಲು ಟಿಕೇಟ್ ಪರಿವೀಕ್ಷಕರ ವಸ್ತ್ರ ಬದಲಾವಣೆಗೆ ಮುಂದಾಗಿದೆ. ಪ್ರೀಮಿಯಂ ರೈಲುಗಳಾದ ಡೋರಾಂಟೋ, ರಾಜಧಾನಿ ಹಾಗೂ ಶತಾಬ್ದಿ ಎಕ್ಸ್ ಪ್ರೆಸ್ ಗಳ ಟಿಕೇಟ್ ಪರಿವೀಕ್ಷಕರು ಇನ್ನು ಮುಂದೆ ಗ್ರೇ ಸೂಟ್ ನಲ್ಲಿ ಕಂಗೊಳಿಸಲಿದ್ದಾರೆ.

ಗ್ರೇ ಜಾಕೆಟ್, ಗ್ರೇ ಟ್ರೌಸರ್, ಬಿಳಿ ಶರ್ಟ್ ಹಾಗೂ ರೆಡ್ ಟೈ ಯನ್ನು ಟಿಟಿಇ ಹಾಗೂ ಸೂಪರಿಟೆಂಡೆಂಟ್ ಗಳಿಗೆ ನಿಗದಿಪಡಿಸಲಾಗಿದ್ದು, ಈ ಕುರಿತು ಈಗಾಗಲೇ ವಿವಿಧ ವಲಯಗಳ ಜನರಲ್ ಮ್ಯಾನೇಜರ್ ಗಳಿಗೆ ಪತ್ರ ಬರೆಯಲಾಗಿದೆ.

ಹೊಸ ಡ್ರೆಸ್ ಕೋಡ್ ಎಂದಿನಿಂದ ಜಾರಿಗೆ ಬರುತ್ತದೆ ಎಂಬುದರ ಕುರಿತು ದಿನಾಂಕ ನಿಗದಿಪಡಿಸಿಲ್ಲವಾದರೂ ಶೀಘ್ರದಲ್ಲೇ ಜಾರಿಗೆ ತರಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಇತರೆ ರೈಲುಗಳ ಟಿಟಿಇ ಗಳಿಗೂ ಈ ಡ್ರೆಸ್ ಕೋಡ್ ವಿಸ್ತರಿಸುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...