alex Certify
ಕನ್ನಡ ದುನಿಯಾ       Mobile App
       

Kannada Duniya

ಶತಾಬ್ಧಿ ರೈಲುಗಳಲ್ಲಿ ಪ್ರಯಾಣಕ್ಕೆ ರಿಯಾಯಿತಿ ಘೋಷಣೆ

shatabdi

ನವದೆಹಲಿ: ಶತಾಬ್ಧಿ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ಘೋಷಿಸಲಾಗಿದೆ.

ನ್ಯೂಡೆಲ್ಲಿ-ಅಜ್ಮೀರ್, ಚೆನ್ನೈ ಸೆಂಟ್ರಲ್-ಮೈಸೂರು ಶತಾಬ್ಧಿ ಎಕ್ಸ್ ಪ್ರೆಸ್ ಸೇರಿದಂತೆ ಹಲವು ಮಾರ್ಗಗಳಲ್ಲಿ ರಿಯಾಯಿತಿ ಘೋಷಿಸಲಾಗಿದೆ. ಚೆನ್ನೈ ಸೆಂಟ್ರಲ್ ನಿಂದ ಮೈಸೂರಿಗೆ ಸಂಚರಿಸುವ ಶತಾಬ್ಧಿ ಎಕ್ಸ್ ಪ್ರೆಸ್ ನಲ್ಲಿ ಬೆಂಗಳೂರಿನಿಂದ ಮೈಸೂರಿಗೆ 440 ರೂ. ದರ ಇದ್ದು, ಇದು 300 ರೂ.ಗೆ ಇಳಿಕೆಯಾಗಲಿದೆ. ರೈಲು ಗಾಡಿ ಸಂಖ್ಯೆ 12007 ರಲ್ಲಿ ಈ ದರ ಅನ್ವಯಿಸುತ್ತವೆ.

ಅದೇ ರೀತಿ ಮೈಸೂರಿನಿಂದ ಚೆನ್ನೈ ಸೆಂಟ್ರಲ್ ಗೆ ಸಂಚರಿಸುವ ರೈಲು ಗಾಡಿ ಸಂಖ್ಯೆ 12008 ರಲ್ಲಿ ಮೈಸೂರಿನಿಂದ ಬೆಂಗಳೂರಿಗೆ 370 ರೂ. ಪ್ರಯಾಣ ದರ ಇದ್ದು, ಅದನ್ನು 300 ರೂ.ಗೆ ಇಳಿಕೆ ಮಾಡಲಾಗುವುದು. ಎರಡೂ ಶತಾಬ್ಧಿ ರೈಲುಗಳಿಗೆ ಫ್ಲೆಕ್ಸಿ ದರಗಳು ಅನ್ವಯವಾಗುವುದಿಲ್ಲ ಎಂದು ಹೇಳಲಾಗಿದೆ.

ರೈಲ್ವೇ ತತ್ಕಾಲ್ ನಲ್ಲಿ ಬದಲಾವಣೆ ಮಾಡಲಾಗಿದೆ. ರಾಜಧಾನಿ, ತುರಂತೋ, ಶತಾಬ್ಧಿ ಎಕ್ಸ್ ಪ್ರೆಸ್ ರೈಲುಗಳಲ್ಲಿ ಸೀಟು ಖಾಲಿ ಇದ್ದರೆ ಮೂಲ ದರದ ಶೇ. 10 ರಷ್ಟು ಕಡಿತ ಮಾಡಲಾಗುವುದು. ಚಾರ್ಟ್ ಸಿದ್ಧವಾದ ಬಳಿಕ ಸೀಟ್ ಖಾಲಿ ಉಳಿದರೆ, ದರ ಕಡಿತ ಮಾಡಲಿದ್ದು, ಪ್ರಾಯೋಗಿಕವಾಗಿ 6 ತಿಂಗಳ ಅವಧಿಗೆ ಇದನ್ನು ಜಾರಿಗೆ ತರಲಾಗುವುದದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...