alex Certify
ಕನ್ನಡ ದುನಿಯಾ       Mobile App
       

Kannada Duniya

ಎಕ್ಸ್ ಪ್ರೆಸ್ ರೈಲಿನಲ್ಲೇ ಆಯ್ತು ಹೆರಿಗೆ

deccan

ಭೂಪಾಲ್: ಗರ್ಭಿಣಿಯೊಬ್ಬರು ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಹೆರಿಗೆಯಾಗಿದ್ದು, ಇದರಿಂದಾಗಿ ಹೈದರಾಬಾದ್ ಡೆಕ್ಕನ್ ಎಕ್ಸ್ ಪ್ರೆಸ್ ರೈಲನ್ನು ಮಾರ್ಗ ಮಧ್ಯೆ ನಿಲ್ಲಿಸಿದ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಿನಾ ರೈಲು ನಿಲ್ದಾಣದಲ್ಲಿ ನಡೆದಿದೆ.

 

ಸಿಕಂದರಾಬಾದ್ ನಿಂದ ನವದೆಹಲಿಗೆ ಹೊರಟಿದ್ದ 24 ವರ್ಷದ ಗರ್ಭಿಣಿ ಸವಿತಾ, ತಮ್ಮ ಪತಿಯೊಂದಿಗೆ ಹೈದರಾಬಾದ್ ಡೆಕ್ಕನ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಸವಿತಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಎಕ್ಸ್ ಪ್ರೆಸ್ ರೈಲಾಗಿದ್ದ ಕಾರಣ, ಸಮೀಪದ ಬಿನಾ ರೈಲು ನಿಲ್ದಾಣದಲ್ಲಿ ನಿಲುಗಡೆ ಇಲ್ಲದಿದ್ದರೂ, ರೈಲಿನ ಸಿಬ್ಬಂದಿ ರೈಲು ನಿಲ್ಲಿಸಿದ್ದಾರೆ. ಈ ನಿಲ್ದಾಣಕ್ಕೆ ರೈಲು ತಲುಪುವ ಮೊದಲೇ ಸವಿತಾ ಅವರಿಗೆ ಹೆರಿಗೆಯಾಗಿದೆ. ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ರೈಲಿನ ಸಿಬ್ಬಂದಿ, ಬಿನಾ ನಿಲ್ದಾಣದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ವೈದ್ಯರು ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದರು.

 

ಆದರೆ, ರೈಲಿನಲ್ಲೆ ಹೆರಿಗೆಯಾಗಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಕ್ಸ್ ಪ್ರೆಸ್ ರೈಲಾಗಿದ್ದರೂ, ಮಾನವೀಯತೆ ದೃಷ್ಟಿಯಿಂದ ಬಿನಾ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...