alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲು ದುರಂತ: ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು…?

ದೇಶದೆಲ್ಲೆಡೆ ನಡೆದ ದಸರಾ ಸಂಭ್ರಮ ಮಾಸುವ ರೀತಿಯಲ್ಲಿ ಅಮೃತಸರ್ ರೈಲು ದುರಂತ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ದುರಂತಕ್ಕೆ ಸಂಬಂಧಿಸಿದಂತೆ ಚಾಲಕ ನೀಡಿರುವ ಕಲಿಕೆಯಲ್ಲಿ ಹುರುಳಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ದುರಂತಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಚಾಲಕ, ರೈಲು ಹಳಿ ಮೇಲೆ ಜನರಿರುವುದು ತಿಳಿಯುತ್ತಿದ್ದಂತೆ ತುರ್ತು ಬ್ರೇಕ್ ಹಾಕಿ ರೈಲನ್ನು ನಿಧಾನಗೊಳಿಸಿದೆ. ಆದರೆ ಜನರು ರೈಲಿಗೆ ಕಲ್ಲು ತೂರಿದ್ದರಿಂದ ಪ್ರಯಾಣಿಕರ ಹಿತದೃಷ್ಠಿಯಿಂದ ರೈಲನ್ನು ನಿಲ್ಲಿಸದೇ ಹಾಗೇ ಮುಂದುವರಿಸಿದೆ ಎಂದು ಹೇಳಿದ್ದರು.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿರುವ ಪ್ರತ್ಯಕ್ಷದರ್ಶಿಯೊಬ್ಬರು, ರೈಲಿನ ವೇಗದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಇದರೊಂದಿಗೆ ಚಾಲಕ ಹೇಳಿಕೆ ನೀಡಿರುವಂತೆ ಯಾರೊಬ್ಬರು ಕಲ್ಲು ತೂರಿಲ್ಲ. ರೈಲು ಬಂದು 61 ಜನರನ್ನು ಹೊಡೆದುಕೊಂಡು ಹೋದ ಘಟನೆ ಕೆಲವೇ ಕ್ಷಣದಲ್ಲಿ ಮುಗಿದಿದೆ. ಈ ವೇಳೆ ನಮಗೆ ಕಲ್ಲು ಹೊಡೆಯಲು ಸಮಯವಾದರೂ ಎಲ್ಲಿತ್ತು ಎಂದು ಪ್ರಶ್ನಿಸಿದ್ದಾರೆ.

ಇನ್ನೊಬ್ಬ ಪ್ರತ್ಯಕ್ಷದರ್ಶಿ ಪ್ರಕಾರ, ರೈಲು ಬಂದ ವೇಗದಲ್ಲಿ ಯಾರೊಬ್ಬರಿಗೂ ಏನು ಮಾಡಬೇಕೆಂದು ತೋಚಿಲ್ಲ. ಘಟನೆ ನಡೆದಾಗ ನಮಗೆ ಮೃತರ ಛಿದ್ರ ಛಿದ್ರವಾದ ದೇಹಗಳು ಹಾಗೂ ಗಾಯಾಳುಗಳ ಆಕ್ರಂದನ ಹೊರತುಪಡಿಸಿ, ಇನ್ನೇನು ಕೇಳಿಲ್ಲ ಎಂದಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಚಾಲಕ ಆರೋಪಿಸುವ ಹಾಗೇ ಸಾರ್ವಜನಿಕರು ಕಲ್ಲುಗಳನ್ನು ತೂರಿಲ್ಲ ಎಂದಿದ್ದಾರೆ.

ಆರೋಪ ಪ್ರತ್ಯಾರೋಪದ ನಡುವೆ, ರೈಲು 68 ಕಿಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ವಿಭಾಗೀಯ ರೈಲ್ವೇ ಅಧಿಕಾರಿ ವಿವೇಕ್ ಕುಮಾರ್ ವರದಿ ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಸಚಿವ ನವಜೋತ್ ಸಿಂಗ್ ಸಿದ್ದು ಪತ್ನಿ ಇದ್ದರೂ ಯಾವುದೇ ಸಹಾಯ ಮಾಡಿಲ್ಲವಾದ್ದರಿಂದ, ಕೂಡಲೇ ಸಿದ್ದು ರಾಜೀನಾಮೆ ನೀಡಬೇಕೆಂದು ಶಿರೋಮಣಿ ಅಕಾಲಿ ದಳ ಆಗ್ರಹಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...