alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಇಂಜಿನ್ ರಹಿತ ರೈಲು ಸಂಚಾರ ಡಿಸೆಂಬರ್ ನಲ್ಲಿ ಆರಂಭ

ದೇಶದ ಮೊದಲ ಇಂಜಿನ್ ರಹಿತ ಸೆಮಿ ಹೈ ಸ್ಪೀಡ್ ರೈಲು ಡಿಸೆಂಬರ್ 15ರಿಂದ ಸಂಚಾರ ಆರಂಭಿಸುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಈ ರೈಲು ಮೊರಾದ್ ಬಾದ್ ನಲ್ಲಿ ಪ್ರಯೋಗಾರ್ಥ ಪ್ರಕ್ರಿಯೆಯಲ್ಲಿದೆ.

ಈ ಟ್ರೈನ್ -18 ಗರಿಷ್ಠ ವೇಗ ಗಂಟೆಗೆ 160 ಕಿ.ಮೀ. ಸಂಚರಿಸಲಿದ್ದು, ದೆಹಲಿ ಮತ್ತು ವಾರಣಾಸಿ ಅಥವಾ ದೆಹಲಿ-ಭೂಪಾಲ್ ನಡುವೆ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಪೂರ್ಣ ಹವಾನಿಯಂತ್ರಿತ ರೈಲು ದೇಶೀ ತಂತ್ರಜ್ಞಾನ ಬಳಸಿ ರಚಿಸಲಾಗಿದೆ. ಈಗಾಗಲೇ ಪ್ರಯೋಗಾರ್ಥ ಸಂಚಾರದಲ್ಲಿ ಗಂಟೆಗೆ 120 ಕಿಲೋ ಮೀಟರ್ ನಲ್ಲಿ ಯಶಸ್ವಿಯಾಗಿ ಸಂಚರಿಸಿದ್ದು, 160 ಕಿ.ಮೀ. ವೇಗದಲ್ಲಿ ಸಂಚರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಬುಲೆಟ್ ರೈಲಿನಂತೆ ಹೋಲುವ ಈ ರೈಲಿನಲ್ಲಿ ಟಚ್ ಫ್ರೀ ಬಯೋ ವ್ಯಾಕ್ಯುಮ್ ಶೌಚಾಲಯ, ಎಲ್ ಇಡಿ ಲೈಟಿಂಗ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಗಳು, ತಾಪಮಾನ ಸರಿ ಹೊಂದಿಸುವ ವ್ಯವಸ್ಥೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...