alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಾಯ್ ಮುಖ್ಯಸ್ಥರು ಆಧಾರ್ ಸಾರ್ವಜನಿಕಗೊಳಿಸ್ತಿದ್ದಂತೆ ಅಕೌಂಟ್ ಗೆ ಹಣ ಹಾಕಿದ ಹ್ಯಾಕರ್ಸ್

ಭಾರತೀಯ ದೂರ ಸಂಚಾರ ನಿಯಂತ್ರಣ ಪ್ರಾಧಿಕಾರ (ಟ್ರಾಯ್ ) ಮುಖ್ಯಸ್ಥ ಆರ್.ಎಸ್. ಶರ್ಮಾ ಟ್ವೀಟರ್ ನಲ್ಲಿ ತಮ್ಮ ಆಧಾರ್ ಕಾರ್ಡ್ ನಂಬರ್ ಹಂಚಿಕೊಂಡಿದ್ದಾರೆ. ಕೇವಲ ಇಷ್ಟು ಮಾಹಿತಿಯಿಂದ ನನಗೆ ಹೇಗೆ ನಷ್ಟ ಮಾಡಬಲ್ಲಿರಿ ಎಂದು ಜನರನ್ನು ಪ್ರಶ್ನೆ ಕೂಡ ಮಾಡಿದ್ದಾರೆ. ಶನಿವಾರ ಟ್ವೀಟರ್ ನಲ್ಲಿ ಶರ್ಮಾ ಆಧಾರ್ ನಂಬರ್ ಬಹಿರಂಗಪಡಿಸುತ್ತಿದ್ದಂತೆ ಹ್ಯಾಕರ್ ಗಳು ತಮ್ಮ ಕೆಲಸ ಶುರು ಮಾಡಿದ್ದಾರೆ.

ಕೆಲವರು ಶರ್ಮಾ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದ್ರ ಮಾಹಿತಿ ನೀಡಿದ್ದಾರೆ. ಮತ್ತೆ ಕೆಲ ಹ್ಯಾಕರ್ಸ್, ಶರ್ಮಾ ಖಾತೆಗೆ ಒಂದು ರೂಪಾಯಿ ಜಮಾ ಮಾಡಿರುವುದಾಗಿ ಹೇಳಿದ್ದಲ್ಲದೆ ವಹಿವಾಟಿನ ಐಡಿ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಕೆಲ ಹ್ಯಾಕರ್ ಗಳು, ಶರ್ಮಾ ನೀಡಿದ ಆಧಾರ್ ನಂಬರ್ ಆಧಾರದ ಮೇಲೆ ಶರ್ಮಾರಿಗೆ ಸಂಬಂಧಿಸಿದ 14 ಮಾಹಿತಿಯನ್ನು ಕಲೆ ಹಾಕಿದ್ದಾರಂತೆ.

ಶರ್ಮಾ ಮೊಬೈಲ್ ನಂಬರ್, ವಿಳಾಸ, ಜನ್ಮದಿನ, ಪ್ಯಾನ್ ನಂಬರ್, ವೋಟರ್ ಐಡಿ ನಂಬರ್, ಟೆಲಿಕಾಂ ಆಪರೇಟರ್, ಪೋನ್ ಮಾಡೆಲ್ ಸೇರಿದಂತೆ 14ಕ್ಕೂ ಹೆಚ್ಚು ಮಾಹಿತಿ ಹ್ಯಾಕರ್ ಕೈ ಸೇರಿದೆಯಂತೆ. ಶರ್ಮಾರ ಐದು ಬ್ಯಾಂಕ್ ಅಕೌಂಟ್ ನ ಐಎಫ್ಎಸ್ಸಿ ಕೋಡ್ ಕೂಡ ಹ್ಯಾಕರ್ ಗಳಿಗೆ ಸಿಕ್ಕಿದೆಯಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...