alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣೆದುರಿನಲ್ಲೇ ಸ್ನೇಹಿತನನ್ನು ಕಳೆದುಕೊಂಡ ಆಸ್ಟ್ರೇಲಿಯಾ ಪ್ರವಾಸಿಗರು

ಇದೇ ಮೊದಲ ಬಾರಿಗೆ ಸ್ನೇಹಿತರೊಂದಿಗೆ ಭಾರತಕ್ಕೆ ಬಂದಿದ್ದ ಆಸ್ಟ್ರೇಲಿಯಾ ಪ್ರವಾಸಿಗನೊಬ್ಬ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾನೆ.

ಆಸ್ಟ್ರೇಲಿಯಾದ ಇಯಾನ್ ಥಾಮಸ್ ಬೋರ್ಗ್, ಬೆನ್ನೆಟ್ ಜೋಯೆಲ್ ಹಾಗೂ ಮ್ಯಾಥ್ಯೂ ಆಂಟೋನಿ ಬಾಲ್ಯ ಸ್ನೇಹಿತರಾಗಿದ್ದು, ಭಾರತದಲ್ಲಿ ಒಂದು ತಿಂಗಳ ಕಾಲ ಪ್ರವಾಸ ಮಾಡಲು ನಿರ್ಧರಿಸಿ ಎರಡು ದಿನಗಳ ಹಿಂದಷ್ಟೇ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು.

ದೆಹಲಿಯ ಹೋಟೆಲ್ ನಲ್ಲಿ ತಂಗಿದ್ದ ಇವರುಗಳು ಈ ಸಮಯದಲ್ಲಿ ಸನಿಹದ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಿ ಶಾಪಿಂಗ್ ಸಹ ನಡೆಸಿದ್ದರು. ಗುರುವಾರದಂದು ದೆಹಲಿ ಮೂಲದ ಏಜೆನ್ಸಿಯೊಂದರಿಂದ ಮೂರು ಎನ್ ಫೀಲ್ಡ್ ಬೈಕ್ ಗಳನ್ನು ಬಾಡಿಗೆಗೆ ಪಡೆದಿದ್ದ ಮೂವರು ಆಗ್ರಾಕ್ಕೆ ತೆರಳುತ್ತಿದ್ದರು.

ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಸಾಗುತ್ತಿದ್ದ ವೇಳೆ ಮ್ಯಾಥ್ಯೂ ಬೈಕ್ ಗೆ ಅತಿ ವೇಗವಾಗಿ ಬಂದ ಬಸ್ ಒಂದು ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಮ್ಯಾಥ್ಯೂ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಣ್ಣೆದುರೇ ಸ್ನೇಹಿತನನ್ನು ಕಳೆದುಕೊಂಡ ಸ್ನೇಹಿತರು ಕಂಗಾಲಾಗಿದ್ದು, ಇದೀಗ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಸ್ನೇಹಿತನ ಮೃತದೇಹವನ್ನು ಆಸ್ಟ್ರೇಲಿಯಾಕ್ಕೆ ತೆಗೆದುಕೊಂಡು ಹೋಗಲು ಕಾನೂನು ಪ್ರಕ್ರಿಯೆಗಳನ್ನು ಪೂರೈಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...