alex Certify
ಕನ್ನಡ ದುನಿಯಾ       Mobile App
       

Kannada Duniya

‘ಟ್ರಾಫಿಕ್’ ನಲ್ಲೇ ತೆಗೆದುಕೊಳ್ಳಿ ‘ಸೆಲ್ಫಿ’ !

trafic selfi

ವಾಹನಗಳ ಸಂಖ್ಯಾ ಸ್ಪೋಟದಿಂದಾಗಿ ರಸ್ತೆಗಳಲ್ಲಿ ಸುಗಮ ಸಂಚಾರ ಎಂಬುದು ಗಗನ ಕುಸುಮವಾಗಿದೆ. ದಿನೇ ದಿನೇ ಹೆಚ್ಚಾಗುತ್ತಿರುವ ಸಂಚಾರದಟ್ಟಣೆಯನ್ನು ನಿಯಂತ್ರಿಸುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ಸಂಚಾರದಟ್ಟಣೆ ಮತ್ತು ಪರಿಸರ ಮಾಲಿನ್ಯ ತಡೆಗೆ ದೆಹಲಿ ಸರ್ಕಾರ ಸಮ, ಬೆಸ ವಾಹನ ಸಂಚಾರ ಪ್ರಯೋಗಕ್ಕೆ ಮುಂದಾಗಿತ್ತು.

ಇತ್ತೀಚೆಗೆ ಬಹುತೇಕ ಎಲ್ಲಾ ನಗರಗಳಲ್ಲಿಯೂ ಟ್ರಾಫಿಕ್ ಜಾಮ್ ಎಂಬುದು ಬಗೆಹರಿಯದ ಸಮಸ್ಯೆಯಾಗಿದೆ. ಸಂಚಾರದಟ್ಟಣೆಗೆ ಮುಕ್ತಿ ಕಂಡುಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಷ್ಟೆಲ್ಲಾ ಕ್ರಮಕೈಗೊಂಡರೂ ಸಮಸ್ಯೆಗೆ ಕಡಿವಾಣ ಹಾಕುವುದು ಕಷ್ಟವಾಗಿದೆ. ಹೀಗಾಗಿ ಕಾನ್ಪುರ ಪೊಲೀಸರು ಟ್ರಾಫಿಕ್ ಸೆಲ್ಫಿ ಅಭಿಯಾನ ಆರಂಭಿಸಿದ್ದಾರೆ. 15 ದಿನಗಳ ಕಾಲ ಇದು ಪ್ರಾಯೋಗಿಕವಾಗಿ ಜಾರಿಯಲ್ಲಿರುತ್ತದೆ. ಕಾನ್ಪುರದ ಅತಿಹೆಚ್ಚು ಸಂಚಾರದಟ್ಟಣೆಯ ಸ್ಥಳಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಸಾರ್ವಜನಿಕರು ಕಿರಿಕಿರಿ ಅನುಭವಿಸಿದರೆ ಅಲ್ಲೇ ಸೆಲ್ಫಿ ತೆಗೆದು ಪೊಲೀಸ್ ಸಹಾಯವಾಣಿ ಫೇಸ್ ಬುಕ್ ಪೇಜ್ ಗೆ ಅಪ್ ಲೋಡ್ ಮಾಡಿದಲ್ಲಿ ತಕ್ಷಣದ ಕ್ರಮಕೈಗೊಳ್ಳಲಾಗುವುದು.

ಕಾನ್ಪುರದಲ್ಲಿ ಸಂಚಾರ ಸಮಸ್ಯೆ ತೀವ್ರತರವಾಗಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಏನೆಲ್ಲಾ ಕ್ರಮಕೈಗೊಂಡರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಸಾರ್ವಜನಿಕರು ಕೂಡ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ತಮ್ಮ ವಾಹನಗಳನ್ನು ಚಲಾಯಿಸಬೇಕೆಂದು ಕಾನ್ಪುರ ಹಿರಿಯ ಪೊಲೀಸ್ ಅಧಿಕಾರಿ ಅಶುತೋಶ್ ಪಾಂಡೆ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...