alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ಕೊಟ್ಟ ಹೂ ರಾತ್ರಿ ಪೂರ್ತಿ ಪತಿ-ಪತ್ನಿ ಜಗಳಕ್ಕೆ ಕಾರಣವಾಯ್ತು…!

ಪತಿ ಹೂ ಕೊಟ್ಟರೆ ಪತ್ನಿ ಖುಷಿಯಾಗ್ತಾಳೆ. ಜಗಳವನ್ನು ಶಾಂತಗೊಳಿಸುವ ಶಕ್ತಿ ಹೂವಿಗಿದೆ. ಆದ್ರೆ ಲಕ್ನೋದಲ್ಲಿ ಗುಲಾಬಿ ಹೂ ಜಗಳಕ್ಕೆ ಕಾರಣವಾಗಿದೆ. ವಾಸ್ತವವಾಗಿ ಲಕ್ನೋ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಅಭಿಯಾನ ಶುರು ಮಾಡಿದ್ದಾರೆ. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವವರಿಗೆ ಒತ್ತಾಯ ಪೂರ್ವಕವಾಗಿ ಹೆಲ್ಮೆಟ್ ಹಾಕಿದ್ರೆ, ಹೆಲ್ಮೆಟ್ ಹಾಕಿ ಬಂದವರಿಗೆ ಗುಲಾಬಿ ಹೂ ನೀಡಿ ಫೋಟೋ ತೆಗೆಸಿಕೊಳ್ತಿದ್ದಾರೆ.

ವ್ಯಕ್ತಿಯೊಬ್ಬ ಹೆಲ್ಮೆಟ್ ಹಾಕಿದ್ದಾನೆಂಬ ಕಾರಣಕ್ಕೆ ಪೊಲೀಸರು ಗುಲಾಬಿ ಹೂ ನೀಡಿ ಫೋಟೋ ತೆಗೆಸಿಕೊಂಡಿದ್ದರು. ವ್ಯಕ್ತಿ ಗುಲಾಬಿ ಹೂ ಹಿಡಿದು ಮನೆಗೆ ಬಂದಿದ್ದಾನೆ. ಆತ ಮನೆಗೆ ಬರ್ತಿದ್ದಂತೆ ಪತ್ನಿ ಪ್ರಶ್ನೆ ಮಾಡಿದ್ದಾಳೆ. ಪೊಲೀಸ್ ಯಾಕೆ ಹೂ ನೀಡ್ತಾರೆಂದು ರಗಳೆ ಶುರು ಮಾಡಿದ್ದಾಳೆ. ರಾತ್ರಿ ಪೂರ್ತಿ ಗಲಾಟೆ ನಡೆದಿದೆ.

ಮಾರನೇ ದಿನ ಪೊಲೀಸ್ ಠಾಣೆಗೆ ಬಂದ ವ್ಯಕ್ತಿ ತನ್ನ ನೋವು ತೋಡಿಕೊಂಡಿದ್ದಾನೆ. ಜೊತೆಗೆ ಪೊಲೀಸ್ ಜೊತೆ ತೆಗೆದಿದ್ದ ಫೋಟೋ ತೆಗೆದುಕೊಂಡು ಹೋಗಿದ್ದಾನೆ. ಈ ವಿಚಾರವನ್ನು ಸಬ್ ಇನ್ಸ್ಪೆಕ್ಟರ್ ಫೇಸ್ಬುಕ್ ನಲ್ಲಿ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...