alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ಮಾಲೀಕರೇ ಈ ನಿಯಮ ತಿಳಿದುಕೊಳ್ಳಿ, ಇಲ್ಲದಿದ್ರೆ ಕಟ್ಟಬೇಕಾಗುತ್ತೆ ಫೈನ್…!

ಲಿಫ್ಟ್ ಕೊಟ್ಟ ಕಾರಣಕ್ಕೆ ಫೈನ್ ಕಟ್ಟಿದ ಅಪರೂಪದ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನಲ್ಲಿ ಈಗ ಭಾರೀ ಮಳೆ ಸುರೀತಿದೆ. ಮಳೆಯ ನಡುವೆಯೇ ಜನರು ನಿತ್ಯ ಕಾಯಕವನ್ನು ಮುಂದುವರೆಸಿದ್ದಾರೆ.

ನಿತಿನ್ ನಾಯರ್ ಎಂಬ ವ್ಯಕ್ತಿ ಕೆಲಸದ ನಿಮಿತ್ತ ಕಾರಿನಲ್ಲಿ ಕಚೇರಿಗೆ ಹೋಗ್ತಿದ್ರು. ದಾರಿಯಲ್ಲಿ ಹಿರಿಯ ವ್ಯಕ್ತಿ, ಇನ್ನಿಬ್ಬರು ಮಳೆಯಲ್ಲಿ ನೆನೆಯುತ್ತಾ ನಿಂತಿದ್ದನ್ನ ನೋಡಿ ಅವರಿಗೆ ಲಿಫ್ಟ್ ಕೊಡೋ ಮನಸ್ಸು ಮಾಡಿದ್ರು.

ಅವರೆಲ್ಲರು ಕೂಡ ನಿತಿನ್ ಅವರು ಹೋಗ್ತಿದ್ದ ದಾರಿಯಲ್ಲೇ ಇಳಿದುಕೊಳ್ಳೋರಿದ್ದರು. ಆದ್ರೆ ಅಷ್ಟರಲ್ಲೇ ಟ್ರಾಫಿಕ್ ಪೊಲೀಸರು ನಿತಿನ್ ಅವರ ಕಾರನ್ನು ಸೀಜ್ ಮಾಡಿದರು. ಅಷ್ಟೇ ಅಲ್ಲ ನ್ಯಾಯಾಲಯದಲ್ಲಿ 1500 ರೂಪಾಯಿ ಫೈನ್ ಕಟ್ಟಿ ಕಾರನ್ನ ವಾಪಸ್ಸು ಪಡೆಯುವಂತೆ ಹೇಳಿದರು. ಆ ಪ್ರಕಾರವೇ ನಿತಿನ್ ತಮ್ಮ ಕಾರನ್ನ ವಾಪಸ್ಸು ಪಡೆದಿದ್ದಾರೆ. ಒಬ್ಬರಿಗೆ ಸಹಾಯ ಮಾಡಿದ ತಪ್ಪಿಗೆ ಪೊಲೀಸರಿಗೆ ದಂಡ ಕಟ್ಟಬೇಕಾಯ್ತ ಅಂತ ಫೇಸ್ಬುಕ್ ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅಸಲಿಗೆ ನಿತಿನ್ ಫೈನ್ ಕಟ್ಟಿದ್ದು ಸಹಾಯ ಮಾಡಿದ್ದಕ್ಕಲ್ಲ. ನಿಯಮಗಳನ್ನ ಉಲ್ಲಂಘಿಸಿದ್ದಕ್ಕೆ. ಸಾಮಾನ್ಯವಾಗಿ ಖಾಸಗಿ ವಾಹನಗಳನ್ನ ವ್ಯಾಪಾರ ಉದ್ದೇಶಗಳಿಗೆ ಬಳಸುವ ಹಾಗಿಲ್ಲ. ಹಳದಿ ಬೋರ್ಡ್ ವಾಹನಗಳಿಗಷ್ಟೇ ಅಪರಿಚಿತ ಪ್ರಯಾಣಿಕರನ್ನು ಡ್ರಾಪ್ ಮಾಡುವ ಅವಕಾಶ ಇರುತ್ತದೆ. ನಿತಿನ್ ಅವರ ಕಾರು ವೈಟ್ ಬೋರ್ಡ್ ನದ್ದಾಗಿತ್ತು. ಖಾಸಗಿ ಕಾರಿನಲ್ಲಿ ಅಪರಿಚಿತ ವ್ಯಕ್ತಿಗಳನ್ನ ಡ್ರಾಪ್ ನೀಡಿದ ತಪ್ಪಿಗೆ ಅವರು ಫೈನ್ ಕಟ್ಟಬೇಕಾಗಿ ಬಂತು. ನೀವೇನಾದ್ರು ಹೀಗೆ ಸಹಾಯ ಮಾಡೋಕೆ ಹೋಗಿ ಫೈನ್ ಕಟ್ಟಿದ್ದೀರಾ…?

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...