alex Certify
ಕನ್ನಡ ದುನಿಯಾ       Mobile App
       

Kannada Duniya

2 ಕೋಟಿ ರೂ. ಮೌಲ್ಯದ ಆಭರಣ ದೋಚಿದ ಪಂಕ್ಚರ್ ಗ್ಯಾಂಗ್

Trader robbed of Rs 2-crore jewelleryಪಂಕ್ಚರ್ ಗ್ಯಾಂಗ್, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ತನ್ನ ಕೈ ಚಳಕ ತೋರಿಸಿದೆ. ಒಬ್ಬ ವ್ಯಾಪಾರಿಯ ಕಾರನ್ನು ನಿಲ್ಲಿಸಿದ ಈ ತಂಡ, ಆತನ ಬಳಿಯಿದ್ದ ಕೋಟ್ಯಾಂತರ ರೂ. ಮೌಲ್ಯದ ಆಭರಣಗಳನ್ನು ಅಪಹರಿಸಿದೆ.

ದೆಹಲಿಯ ಪ್ರೀತ್ ವಿಹಾರ್ ಏರಿಯಾದ ಬಳಿ ವಿಜಯ್ ಗುಪ್ತಾ ಎಂಬುವರು ಸುಮಾರು 2 ಕೋಟಿ ರೂ. ಮೌಲ್ಯದ ವಜ್ರಾಭರಣಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಗುಪ್ತಾ ಅವರ ಕಾರನ್ನು ತಡೆದು ನಿಲ್ಲಿಸಿದ ಪಂಕ್ಚರ್ ಗ್ಯಾಂಗ್, ತಮ್ಮ ಕಾರ್ ಪಂಕ್ಚರ್ ಆಗಿದೆ ಎಂದು ಹೇಳಿದೆ. ಗುಪ್ತಾ ಅವರು ಕಾರಿನಿಂದ ಕೆಳಗಿಳಿದು ಟೈರ್ ಗಳನ್ನು ಪರೀಕ್ಷಿಸುತ್ತಿದ್ದ ವೇಳೆ ಕಾರಿನ ಗ್ಲಾಸ್ ಒಡೆದ ಕಳ್ಳರು ಕಾರಿನಲ್ಲಿದ್ದ ಆಭರಣಗಳನ್ನು ದೋಚಿಕೊಂಡು ಬೈಕ್ ನಲ್ಲಿ ಪರಾರಿಯಾಗಿದ್ದಾರೆ.

ಗುಪ್ತಾ ಅವರು ವಜ್ರದ ಆಭರಣಗಳ ಮಾರಾಟಗಾರರಾಗಿದ್ದು, ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದೇ ಮಾದರಿಯಲ್ಲಿ ಈ ಕಳ್ಳರ ತಂಡ ಹಿಂದೆಯೂ ಹಲವರ ಬಳಿ ಹಣ, ಆಭರಣ ದೋಚಿತ್ತೆಂದು ಹೇಳಲಾಗಿದ್ದು, ಇದೇ ತಂಡ ಈ ಕೃತ್ಯವೆಸಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...