alex Certify
ಕನ್ನಡ ದುನಿಯಾ       Mobile App
       

Kannada Duniya

ಎಮ್ಮೆ ಹುಡುಕಿ ಸುಸ್ತಾಗಿದ್ದಾರೆ ಈ ಪೊಲೀಸರು

ಕಳೆದ 10 ದಿನಗಳಿಂದ ದೆಹಲಿ ಪೊಲೀಸರ ತಂಡವೊಂದು ಎಮ್ಮೆಗಳಿಗಾಗಿ ಹುಡುಕಾಟ ನಡೆಸ್ತಿದೆ. ಅಕ್ಟೋಬರ್ 29ರಂದು ನಜಫ್ಗಢದಲ್ಲಿ 3 ಎಮ್ಮೆಗಳು ಕಾಣೆಯಾಗಿವೆಯಂತೆ. ಸರ್ಕಾರಿ ನೌಕರ ಸುಶೀಲ್ ಕುಮಾರ್ ಎಂಬಾತ ಈ ಎಮ್ಮೆಗಳನ್ನು ಸಾಕಿದ್ದರು.

ಮೂರು ಎಮ್ಮೆಗಳು ಹಾಗೂ ನಾಲ್ಕು ಕರುಗಳನ್ನು ಯಾರೋ ಕದ್ದೊಯ್ದಿದ್ದಾರೆ ಅನ್ನೋದು ಅವರ ಅನುಮಾನ. ಎಮ್ಮೆ ಮತ್ತು ಕರುಗಳು ಕಾಣೆಯಾದ ಮಾರನೇ ದಿನವೇ ಈ ಬಗ್ಗೆ ಸುಶೀಲ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಮನೆ ಮುಂದೆ ಅಳವಡಿಸಿದ್ದ ಸಿಸಿ ಟಿವಿ ದೃಶ್ಯಾವಳಿಗಳನ್ನೂ ನೀಡಿದ್ದಾರೆ. ಆದ್ರೆ ಕ್ಯಾಮರಾದಲ್ಲಿ ರೆಕಾರ್ಡ್ ಆಗಿರೋ ದೃಶ್ಯಗಳು ಅಸ್ಪಷ್ಟವಾಗಿರುವುದರಿಂದ ಪೊಲೀಸರಿಗೆ ಎಮ್ಮೆ ಕಳ್ಳರ ಬಗ್ಗೆ ಸುಳಿವೇ ಸಿಕ್ಕಿಲ್ಲ.

ಎಮ್ಮೆಗಳ ಬಣ್ಣ, ಗಾತ್ರ, ಉದ್ದ, ಬಾಲದ ಚಹರೆ ಎಲ್ಲಾ ವಿವರಗಳನ್ನೂ ಸುಶೀಲ್ ಕುಮಾರ್ ಎಫ್ ಐ ಆರ್ ನಲ್ಲಿ ಉಲ್ಲೇಖಿಸಿದ್ದಾರೆ. ಯಾರೋ ವ್ಯಾನ್ ನಲ್ಲಿ ಬಂದು ಎಮ್ಮೆಗಳನ್ನು ಹೊತ್ತೊಯ್ದಿದ್ದಾರೆ ಅನ್ನೋದು ಅವರ ಅನುಮಾನ. ಆದ್ರೆ ಕಳ್ಳರು ಮನೆಯ ಹೊರಗೇ ಕಟ್ಟಿಹಾಕಿದ್ದ ಹಸುಗಳನ್ನು ಕಳವು ಮಾಡಿಲ್ಲ. ಎಮ್ಮೆಗಳನ್ನು ಹುಡುಕಲು ಸಬ್ ಇನ್ಸ್ ಪೆಕ್ಟರ್ ನೇತೃತ್ವದ ಪೊಲೀಸ್ ತಂಡ ಸರ್ಕಸ್ ಮಾಡ್ತಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...