alex Certify
ಕನ್ನಡ ದುನಿಯಾ       Mobile App
       

Kannada Duniya

ಸಫಾರಿಯಲ್ಲಿ ಸೆರೆಯಾದ ದೃಶ್ಯ ವರ್ಷದ ನಂತರ ಬಯಲು

tiger-corbett

ಡೆಹ್ರಾಡೂನ್ ನಲ್ಲಿರುವ ಕಾರ್ಬೆಟ್ ಹುಲಿಗಳ ರಕ್ಷಿತಾರಣ್ಯದಲ್ಲಿ ನಡೆದಿರುವ ಘಟನೆ ಇದಾಗಿದೆ. ಒಂದು ವರ್ಷ ಹಳೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಏನಿದು ಘಟನೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಕಾರ್ಬೆಟ್ ಟೈಗರ್ ಸಫಾರಿಯಲ್ಲಿ ಪ್ರವಾಸಕ್ಕೆ ಬಂದವರನ್ನು ವಾಹನದಲ್ಲಿ ಬಯಲಿನಲ್ಲಿರುವ ಹುಲಿಗಳನ್ನು ತೋರಿಸಲು ಗೈಡ್ ಕರೆದುಕೊಂಡು ಹೋಗಿದ್ದಾನೆ. ಈ ಸಂದರ್ಭದಲ್ಲಿ ಪ್ರವಾಸಿಗರಿಗೆ ಮನರಂಜನೆ ಕೊಟ್ಟು ಹೆಚ್ಚು ಹಣ ಪಡೆಯಬಹುದೆಂಬ ಉದ್ದೇಶದಿಂದ ಹುಲಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ತನ್ನ ಪಾಡಿಗೆ ತಾನು ನಡೆದುಕೊಂಡು ಬರುತ್ತಿದ್ದ ಹುಲಿಗೆ ಹೋಗಲು ದಾರಿ ಬಿಡದೇ ಅಡ್ಡಲಾಗಿ ವಾಹನ ನಿಲ್ಲಿಸಿ ತೊಂದರೆ ಕೊಟ್ಟಿದ್ದಾನೆ. ಇದರಿಂದ ಪ್ರವಾಸಿಗರು ಖುಷಿ ಪಟ್ಟಿದ್ದಾರೆ.

ಹುಲಿ ನೆಗೆದು ಮುಂದೆ ಸಾಗಿ ಹೋಗಿದೆ. ಇದೆಲ್ಲವನ್ನು ಅಲ್ಲಿದ್ದವರು ಸೆರೆ ಹಿಡಿದು, ಈಗ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಅದು ವೈರಲ್ ಆಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಕಾರ್ಬೆಟ್ ಟೈಗರ್ ಸಫಾರಿಯ ಅಧಿಕಾರಿಗಳು ಗೈಡ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ಆತನ ಲೈಸೆನ್ಸ್ ಕ್ಯಾನ್ಸಲ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...