alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣಕ್ಕೇ ಸಂಚಕಾರ ತಂದಿತ್ತು ಫೋಟೋ ಗೀಳು

ಫೋಟೋ ಗೀಳು ಮುಂಬೈನಲ್ಲಿ ಪ್ರವಾಸಿಗನನ್ನು ಬಲಿ ಪಡೆಯುತ್ತಿತ್ತು, ಅದೃಷ್ಟ ನೆಟ್ಟಗಿದ್ದಿದ್ರಿಂದ ಆತ ಬಚಾವ್ ಆಗಿದ್ದಾನೆ. ಬಾಂದ್ರಾ-ವರ್ಲಿ ಸೀ ಲಿಂಕ್ ಮೇಲೆ ನಿಂತು ಸುಂದರ ಫೋಟೋ ಕ್ಲಿಕ್ಕಿಸಿಕೊಳ್ಳಲು ನಿಖರ್ ಸಾಹು ಮುಂದಾಗಿದ್ದ.

ತುದಿಯಲ್ಲಿ ನಿಂತಿದ್ದರಿಂದ ಆಯ ತಪ್ಪಿ ನೀರಿಗೆ ಬಿದ್ದಿದ್ದಾನೆ. ಸುಮಾರು 2 ಕಿಮೀ ದೂರದ ದಾದರ್ ವರೆಗೂ ಆತ ಕೊಚ್ಚಿಕೊಂಡು ಹೋಗಿದ್ದ. ಮುಂಬೈ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆತನನ್ನು ರಕ್ಷಿಸಿ ಮೇಲಕ್ಕೆ ಕರೆತಂದಿದ್ದಾರೆ.

ನಿಖರ್ ಉತ್ತರ ಪ್ರದೇಶ ಮೂಲದವನು, ಕ್ಯಾಬ್ ಚಾಲಕನಾಗಿ ಕೆಲಸ ಮಾಡ್ತಿದ್ದಾನೆ. ಪ್ರಜ್ಞಾಹೀನನಾಗಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದೊಂದು ಆತ್ಮಹತ್ಯೆಯ ಪ್ರಯತ್ನವೂ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಆದ್ರೆ ಪ್ರತ್ಯಕ್ಷದರ್ಶಿಗಳು ಹೇಳುವಂತೆ ನಿಖರ್ ಫೋಟೋ ಕ್ಲಿಕ್ಕಿಸಿಕೊಳ್ತಿದ್ದಾಗ್ಲೇ ನೀರಿಗೆ ಬಿದ್ದಿದ್ದ. ಸ್ವಲ್ಪ ದೂರ ನಿಖರ್ ಈಜಿಕೊಂಡು ಹೋಗಿ, ನಂತರ ಸುಸ್ತಾಗಿ ಪ್ರಜ್ಞೆ ತಪ್ಪಿರಬಹುದು ಅಂತಾ ಹೇಳಲಾಗ್ತಿದೆ. ಆತನ ಸಂಬಂಧಿಕರನ್ನು ಪತ್ತೆ ಮಾಡಲು ಪೊಲೀಸರು ಯತ್ನಿಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...