alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸೋದ್ಯಮಕ್ಕೆ ಮತ್ತೆ ಸಜ್ಜಾದ ಕೇರಳ

ಜಲಪ್ರಳಯದ ಕಾರಣದಿಂದ ಕಂಗಾಲಾಗಿದ್ದ ಕೇರಳ ರಾಜ್ಯವು ಇದೀಗ ಚೇತರಿಸಿಕೊಂಡಿದ್ದು, ಪ್ರವಾಸಿಗರನ್ನು ಸೆಳೆಯಲು ಸಜ್ಜಾಗಿದೆ.

ಕಳೆದು ಒಂದು ತಿಂಗಳ ಬಳಿಕ ಆಸ್ಟ್ರೇಲಿಯಾ ಪ್ರವಾಸಿಗರು ಚಾರ್ಟರ್ಡ್ ವಿಮಾನದಲ್ಲಿ ಕೊಚ್ಚಿಗೆ ಬಂದಿಳಿದಿದ್ದು, ಆವರಿಗೆ ಆದರದ ಸ್ವಾಗತ ಕೊಡಲಾಗಿದೆ. ಅಲ್ಲಿನ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ಟ್ವೀಟ್ ಮಾಡಿ, ಈ ಬಾರಿಯ ಪ್ರವಾಸೋದ್ಯಮ ಋತುವಿಗೆ ಉತ್ತಮ ಆರಂಭ ಸಿಗುವ ವಿಶ್ವಾಸದಲ್ಲಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಳೆಯಿಂದ ಹಾನಿಗೊಳಗಾಗಿದ್ದ ರಸ್ತೆಗಳು, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳನ್ನು ಸಹಜ ಸ್ಥಿತಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಕೇರಳ ಪ್ರವಾಸೋದ್ಯಮಕ್ಕೆ ಹಿಂದಿನಂತೆಯೇ ಸಜ್ಜಾಗುತ್ತಿದೆ, ಪ್ರವಾಸೋದ್ಯಮಕ್ಕೆ ಪೂರಕವಾದ ಪ್ರವಾಸಿ ತಾಣ, ಹೋಟೆಲ್, ರೆಸಾರ್ಟ್ ಮೇಲೆ ಇಲ್ಲಿನ ಸಂದರ್ಭ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಮುನ್ನಾರ್, ತೇಕಡಿ, ವೈನಾಡ್ ಪ್ರದೇಶಗಳು ಪ್ರವಾಹ, ಭೂ ಕುಸಿತದಿಂದ ಹಾನಿಗೊಳಗಾಗಿದ್ದು, ಈಗ ಪ್ರವಾಸಿಗರ ಭೇಟಿಗೆ ಅವಕಾಶ ಕೊಡಲಾಗಿದೆ.

ಜಲಪ್ರವಾಹದಿಂದಾಗಿ ಮೇ.29 ರಿಂದ ಇಲ್ಲಿಯವರೆಗೆ ಕೇರಳದಲ್ಲಿ 491 ಮಂದಿ ಮೃತಪಟ್ಟಿದ್ದು, ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...