alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಡ್ರಗ್ಸ್ ಕೇಸಲ್ಲಿ ನಟ, ನಟಿಯರಿಗೆ ನೋಟಿಸ್

toly

ಹೈದರಾಬಾದ್: ಪಂಜಾಬ್ ಡ್ರಗ್ಸ್ ರಾಕೆಟ್ ದಂಧೆಯ ತವರು ಎನ್ನಲಾಗಿತ್ತಾದರೂ, ಟಾಲಿವುಡ್ ಚಿತ್ರರಂಗವನ್ನೇ ಬೆಚ್ಚಿ ಬೀಳಿಸುವ ಸಂಗತಿ ಬಯಲಾಗಿದೆ.

ಡ್ರಗ್ಸ್ ರಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ನಾಯಕ ನಟರು, ಮೂವರು ನಟಿಯರು ಹಾಗೂ ಓರ್ವ ನಿರ್ದೇಶಕನಿಗೆ ವಿಚಾರಣೆಗೆ ಹಾಜರಾಗಲು ವಿಶೇಷ ತನಿಖಾ ತಂಡ ನೋಟಿಸ್ ಜಾರಿ ಮಾಡಿದೆ.

ಡ್ರಗ್ಸ್ ದಂಧೆಯ ಕಿಂಗ್ ಪಿನ್ ಕೆಲ್ವಿನ್ ಫೋನ್ ನಿಂದ ಕರೆ ಹೋದ ಆಧಾರದ ಮೇಲೆ ತನಿಖೆ ಕೈಗೊಳ್ಳಲಾಗಿದೆ. ಟಾಲಿವುಡ್ 10 ಮಂದಿಗೆ ನೋಟಿಸ್ ಜಾರಿಯಾಗಿದ್ದು, ಇನ್ನೂ 35 ಮಂದಿಗೆ ಇನ್ನೆರಡು ದಿನದಲ್ಲಿ ನೋಟಿಸ್ ಜಾರಿ ಮಾಡಲಾಗುವುದು ಎಂದು ತನಿಖಾ ತಂಡದ ನಿರ್ದೇಶಕ ಅಕುನ್ ಸಬರ್ ವಾಲ್ ತಿಳಿಸಿದ್ದಾರೆ.

ತೆಲಂಗಾಣದಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ಕೆಲ್ವಿನ್ ವಿಚಾರಣೆಯಲ್ಲಿ ಗೊತ್ತಾಗಿ ಎನ್.ಡಿ.ಪಿ.ಎಸ್. ಆಕ್ಟ್ 67 ರ ಅಡಿ ಪ್ರಕರಣ ದಾಖಲಾಗಿದೆ.

ಆಡಿಕ್ಟ್ ಯಾರು, ಸಪ್ಲೈಯರ್ ಯಾರು, ಯಾರಿಗೆ ನೋಟಿಸ್ ನೀಡಿದೆ ಎಂಬುದರ ಬಗ್ಗೆ ಈಗಲೇ ಹೇಳಲ್ಲ. ವಿಚಾರಣೆ ಬಳಿಕ ಮಾಹಿತಿ ನೀಡುವುದಾಗಿ ಅಕುನ್ ಸಬರ್ ವಾಲ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...