alex Certify
ಕನ್ನಡ ದುನಿಯಾ       Mobile App
       

Kannada Duniya

ನೆರೆ ಸಂತ್ರಸ್ಥರಿಗಾಗಿ ಮೈಕ್ ಹಿಡಿಯಲಿದ್ದಾರೆ ನ್ಯಾಯಾಧೀಶರು

ಕೇರಳದ ಪ್ರವಾಹಕ್ಕೆ ದೇಶವಾಸಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರೂ ಕೈ ಜೋಡಿಸಿದ್ದು ಗೊತ್ತಿರುವ ವಿಚಾರ. ಆದ್ರೆ, ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರು ಸೋಮವಾರ ಕೇರಳದ ಕಾರ್ಯಕ್ರಮದಲ್ಲಿ ಹಾಡು ಹಾಡಿ, ನಿಧಿ ಸಂಗ್ರಹಕ್ಕೆ ಮುಂದಾಗಲಿದ್ದಾರೆ.

ಕೇರಳ ಪ್ರವಾಹ ಪೀಡಿತ ಪ್ರದೇಶಗಳಿಗೆ ನೆರವು ನೀಡಲು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾ. ಕೆ.ಎಂ. ಜೋಸೆಫ್ ಎರಡು ಹಾಡುಗಳನ್ನು ಹಾಡಲಿದ್ದಾರೆ. ಒಂದು ಮಲಯಾಳಿ ಹಾಗೂ ಇನ್ನೊಂದು ಹಿಂದಿಯ ಹಾಡಿಗೆ ಜೋಸೆಫ್ ಧ್ವನಿಯಾಗಲಿದ್ದಾರೆ. ಈ ಕಾರ್ಯಕ್ರಮದಿಂದ ಬಂದ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ರೂಪದಲ್ಲಿ ನೀಡಲು ನಿರ್ಧರಿಸಲಾಗಿದೆ. ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ.

ಇತ್ತೀಚಿನ ದಿನಗಳಲ್ಲಿ ಮೊದಲ ಬಾರಿಗೆ ನ್ಯಾಯಾಲಯದ ನ್ಯಾಯಾಧೀಶರು ಮೈಕ್ ಹಿಡಿದು, ಹಿನ್ನೆಲೆ ಗಾಯಕರ ಜೊತೆ ಧ್ವನಿಗೂಡಿಸುತ್ತಿರುವುದು ವಿಶೇಷ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...