alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಅತಿ ವೇಗವಾಗಿ ಸಂಚರಿಸುವ 10 ರೈಲುಗಳು

Gatimaan Expressಭಾರತದಲ್ಲಿ ಬುಲೆಟ್ ಟ್ರೈನ್ ಆರಂಭಿಸಲು ಚಿಂತನೆ ನಡೆದಿರುವ ಮಧ್ಯೆ ದೇಶದ ಮೊದಲ ಅತಿ ವೇಗದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗತಿಮಾನ್ ಎಕ್ಸ್ ಪ್ರೆಸ್ ಗೆ ಮಂಗಳವಾರದಂದು ಚಾಲನೆ ನೀಡಲಾಗಿದೆ. ದೆಹಲಿ- ಆಗ್ರಾ ಮಧ್ಯೆ ಸಂಚರಿಸುವ ಈ ರೈಲು 105 ನಿಮಿಷದಲ್ಲಿ 200 ಕಿ.ಮೀ. ಕ್ರಮಿಸಲಿದ್ದು, ಶುಕ್ರವಾರ ಹೊರತುಪಡಿಸಿ ವಾರದ ಉಳಿದೆಲ್ಲಾ ದಿನಗಳಂದು ಸಂಚರಿಸಲಿದೆ. ಪ್ರತಿ ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಭಾರತದಲ್ಲಿ ಇನ್ನೂ ಹಲವು ರೈಲುಗಳು ವೇಗವಾಗಿ ಸಂಚರಿಸುತ್ತಿದ್ದು, ಅವುಗಳ ಪಟ್ಟಿ ಇಲ್ಲಿದೆ ನೋಡಿ.

ನ್ಯೂ ಡೆಲ್ಲಿ- ಭೂಪಾಲ್ ಶತಾಬ್ದಿ ಎಕ್ಸ್ ಪ್ರೆಸ್ ಪ್ರತಿ ಗಂಟೆಗೆ 91 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದ್ದು, 1988 ರಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ. ಮುಂಬೈ- ನ್ಯೂ ಡೆಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ಕೂಡಾ ವೇಗವಾಗಿ ಸಂಚರಿಸುವ ರೈಲುಗಳಲ್ಲಿ ಒಂದಾಗಿದ್ದು, ಇದು ಪ್ರತಿ ಗಂಟೆಗೆ 90.46 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. 1385 ಕಿ.ಮೀ. ದೂರವನ್ನು ಕ್ರಮಿಸಲು ಈ ರೈಲು 19 ಗಂಟೆ 50 ನಿಮಿಷ ತೆಗೆದುಕೊಳ್ಳುತ್ತದೆ.

ಸೆಲ್ಡಾ- ನ್ಯೂ ಡೆಲ್ಲಿ ಡುರ್ಯಾಂಟೋ ರೈಲು ಪಶ್ಚಿಮ ಬಂಗಾಳ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿ ನಡುವೆ ಸಂಚರಿಸುತ್ತಿದ್ದು, ಇದರ ವೇಗ ಪ್ರತಿ ಗಂಟೆಗೆ 91.13 ಕಿ.ಮೀ. ಆಗಿದೆ. ನ್ಯೂ ಡೆಲ್ಲಿ- ಕಾನ್ಪುರ್ ಶತಾಬ್ದಿ ಎಕ್ಸ್ ಪ್ರೆಸ್ ರೈಲು ವೇಗದ ರೈಲುಗಳ ಪೈಕಿ ಒಂದಾಗಿದ್ದು, ಇದನ್ನೂ ಕಾನ್ಪುರ್ ರಿವರ್ಸ್ ಶತಾಬ್ದಿ ರೈಲು ಎಂದೂ ಕರೆಯಲಾಗುತ್ತಿದೆ. ಇದು ಪ್ರತಿ ಗಂಟೆಗೆ 89.63 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ.

ನ್ಯೂ ಡೆಲ್ಲಿ- ಹೌರಾ ರಾಜಧಾನಿ ಎಕ್ಸ್ ಪ್ರೆಸ್ ರೈಲು ಪ್ರತಿ ಗಂಟೆಗೆ 88.21 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದ್ದು, ದೆಹಲಿ ಮತ್ತು ಕೋಲ್ಕತ್ತಾ ನಡುವೆ ಸಂಪರ್ಕ ಸಾಧಿಸುವ ಈ ರೈಲು ವೈಫೈ ಸೌಲಭ್ಯ ಹೊಂದಿರುವ ಪ್ರಥಮ ರೈಲು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ನ್ಯೂ ಡೆಲ್ಲಿ- ಹೌರಾ ಡ್ಯುರ್ಯಾಂಟೋ ಎಕ್ಸ್ ಪ್ರೆಸ್ 87.06 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ನ್ಯೂ ಡೆಲ್ಲಿ- ಅಲಹಾಬಾದ್ ಡ್ಯುರ್ಯಾಂಟೋ ಎಕ್ಸ್ ಪ್ರೆಸ್ ಪ್ರತಿ ಗಂಟೆಗೆ 86.85 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ಸೆಲ್ಡಾ- ನ್ಯೂ ಡೆಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ಪ್ರತಿ ಗಂಟೆಗೆ 87.06 ಕಿ.ಮೀ. ವೇಗದಲ್ಲಿ ಸಂಚರಿಸಿದರೆ, ನಿಜಾಮುದ್ದೀನ್- ಬಾಂದ್ರಾ ಗರೀಬ್ ರಥ್ ಪ್ರತಿ ಗಂಟೆಗೆ 130 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...