alex Certify
ಕನ್ನಡ ದುನಿಯಾ       Mobile App
       

Kannada Duniya

ಟಾಯ್ಲೆಟ್ ನೀರಿನಿಂದ ತಯಾರಾಗ್ತಾ ಇತ್ತು ಟೋಮೋಟೋ ಸೂಪ್..!

254732489dooranto-ll

ರೈಲಿನಲ್ಲಿ ಸಿಗುವ ಊಟ, ತಿಂಡಿಯ ಗುಣಮಟ್ಟದ ಬಗ್ಗೆ ಆಗಾಗ ಚರ್ಚೆಯಾಗುತ್ತಿರುತ್ತದೆ. ಅಲ್ಲಿ ಕೊಡುವ ಆಹಾರದ ಗುಣಮಟ್ಟ ಕಳಪೆಯಾಗಿರುತ್ತದೆ ಎಂಬ ಕಾರಣಕ್ಕೆ ಅನೇಕ ಪ್ರಯಾಣಿಕರು ರೈಲಿನಲ್ಲಿ ಸಿಗುವ ಆಹಾರವನ್ನು ಸೇವಿಸುವುದಿಲ್ಲ. ಈಗ ಮತ್ತೆ ರೈಲಿನ ಆಹಾರದ ಗುಣಮಟ್ಟ ಬಗ್ಗೆ ಪ್ರಶ್ನೆ ಎದ್ದಿದೆ. ರೈಲಿನಲ್ಲಿ ಅಲ್ಪ ಸ್ವಲ್ಪ ಆಹಾರ ತಿನ್ನುತ್ತಿದ್ದವರೂ ಇನ್ನು ಇದ್ರ ಸಹವಾಸ ಬೇಡ ಎನ್ನುವಂತಹ ಸುದ್ದಿ ಹೊರಬಿದ್ದಿದೆ.

ಎರ್ನಾಕುಲಂ-ಕೋಲ್ಕತಾ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣಿಸ್ತಾ ಇದ್ದ ಪ್ರಯಾಣಿಕರೊಬ್ಬರು ಲಿಖಿತ ದೂರು ಸಲ್ಲಿಸಿದ್ದಾರೆ. ರೈಲಿನಲ್ಲಿ ತಯಾರಾಗ್ತಾ ಇದ್ದ ಟೊಮೋಟೋ ಸೂಪ್ ಗೆ ಟಾಯ್ಲೆಟ್ ನೀರನ್ನು ಬಳಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅಡುಗೆ ಸಿಬ್ಬಂದಿಯೊಬ್ಬ ಟಾಯ್ಲೆಟ್ ನಿಂದ ನೀರು ಹಿಡಿದಿರುವುದನ್ನು ಪ್ರಯಾಣಿಕ ನೋಡಿದ್ದಾನೆ. ಸಹ ಪ್ರಯಾಣಿಕನಿಗೂ ಇದನ್ನು ತೋರಿಸಿದ್ದಾನೆ.

ಸಿಬ್ಬಂದಿಗೆ ಈ ಬಗ್ಗೆ ಕೇಳಿದಾಗ ಗಲಾಟೆ ಶುರುವಾಗಿದೆ. ಸುಮಾರು 15 ನಿಮಿಷಗಳ ಕಾಲ ರೈಲನ್ನು ನಿಲ್ಲಿಸಲಾಗಿದೆ. ನಂತ್ರ ಪ್ರಯಾಣಿಕ ಕೋಯಿಕೋಡ್ ರೈಲ್ವೆ ಸ್ಟೇಷನ್ ಮಾಸ್ಟರ್ಗೆ ದೂರು ಸಲ್ಲಿಸಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಸ್ಟೇಷನ್ ಮಾಸ್ಟರ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...