alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿದ್ಧವಾಯ್ತು ಶೌಚಾಲಯ

ಖಾಲಿ ಪ್ಲಾಸ್ಟಿಕ್ ಬಾಟಲಿಗಳು ಯಾವ ಪ್ರಯೋಜನಕ್ಕೂ ಬರಲ್ಲ ಅಂತಾ ನಾವು ಎಸೆಯುತ್ತೇವೆ. ಆದ್ರೆ ಪಶ್ಚಿಮ ಬಂಗಾಳದ ಅಶೋಕ್ ಎಂಬಾತ ಪ್ಲಾಸ್ಟಿಕ್ ಬಾಟಲಿ ಬಳಸಿ ಶೌಚಾಲಯ ಕಟ್ಟಿದ್ದಾರೆ. ಕೇಳಲು ಆಶ್ಚರ್ಯವಾದ್ರೂ ಇದು ಸತ್ಯ.

ಪಶ್ಚಿಮ ಬಂಗಾಳದ ವರ್ಧಮಾನ್ ಜಿಲ್ಲೆಯ ನಿವಾಸಿ ಅಶೋಕ್ ಪ್ಲಾಸ್ಟಿಕ್ ಬಾಟಲಿಯಿಂದ ಕಟ್ಟಿರುವ ಶೌಚಾಲಯ ನೋಡಲು ದೂರದೂರಿನಿಂದ ಜನರು ಬರ್ತಿದ್ದಾರೆ. ಅಶೋಕ್ ಬಳಿ ಶೌಚಾಲಯ ನಿರ್ಮಾಣ ಮಾಡುವಷ್ಟು ಹಣವಿರಲಿಲ್ಲ. ಆದ್ರೆ ಶೌಚಾಲಯ ನಿರ್ಮಾಣ ಅನಿವಾರ್ಯವಾಗಿತ್ತು.

ಪ್ಲಾಸ್ಟಿಕ್ ಬಾಟಲಿಯಿಂದ ಶೌಚಾಲಯ ನಿರ್ಮಾಣಕ್ಕೆ ಕೈ ಹಾಕಿದ ಅಶೋಕ್ ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಯಶಸ್ವಿಯಾಗಿದ್ದಾರೆ. ಇಟ್ಟಿಗೆಗಿಂತ ಪ್ಲಾಸ್ಟಿಕ್ ಬಾಟಲಿ ಅಗ್ಗವಾಗಿ ಸಿಗುತ್ತೆ ಎನ್ನುತ್ತಾರೆ ಅಶೋಕ್.

ಸಾಲಾಗಿ ಪ್ಲಾಸ್ಟಿಕ್ ಬಾಟಲಿಗಳನ್ನು ಇಡಲಾಗುತ್ತದೆ. ನಂತ್ರ ಮರಳು ಹಾಗೂ ಮಣ್ಣಿನಿಂದ ಅವುಗಳನ್ನು ಜೋಡಿಸಲಾಗುತ್ತದೆ. ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಯುಂಟು ಮಾಡುತ್ತದೆ. ಅದನ್ನು ಮರು ಬಳಕೆ ಮಾಡುವುದು ಕೂಡ ಸುಲಭವಲ್ಲ. ದೇಶದಲ್ಲಿ  ಅನುಪಯುಕ್ತ ಪ್ಲಾಸ್ಟಿಕ್ ಬಾಟಲಿ ಪ್ರಮಾಣ ಹೆಚ್ಚಿದ್ದು, ಅಶೋಕ್ ಅನುಸರಿಸಿರುವ ವಿಧಾನದ ಮೂಲಕ ಪರಿಸರ ಹಾನಿ ತಪ್ಪಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...