alex Certify
ಕನ್ನಡ ದುನಿಯಾ       Mobile App
       

Kannada Duniya

ಶೌಚಾಲಯಕ್ಕೆ ಹೋದ ತಪ್ಪಿಗೆ ತೆತ್ತ ಬೆಲೆ 2.8 ಲಕ್ಷ ರೂ.

57890ಬಸ್ ಏರುವ ನಿಲ್ದಾಣದಲ್ಲಿದ್ದ ಶೌಚಾಲಯಕ್ಕೆ ಹೋದ ವ್ಯಕ್ತಿಯೊಬ್ಬ ಇದಕ್ಕಾಗಿ ಭಾರೀ ಬೆಲೆಯನ್ನೇ ತೆತ್ತಿದ್ದಾನೆ. ಇದೀಗ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಪುಣೆಯ ಸ್ವರ್ ಗೇಟ್ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವಸೈನಲ್ಲಿ ನೈಲ್ ಪಾಲಿಶ್ ಘಟಕ ಹೊಂದಿದ್ದ ಧನಕವಾಡಿಯ ಅಶೋಕ್ ಸೀತಾರಾಂ ವೈಷ್ಣವ್ ಎಂಬವರು ಸೋಮವಾರ ಬೆಳಿಗ್ಗೆ 5-30 ರ ಸುಮಾರಿಗೆ ವಸೈಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಿದ್ದಾರೆ.

ಬಸ್ ಹೊರಡಲು ಇನ್ನೂ ಸಮಯವಿದ್ದ ಕಾರಣ ಶೌಚಾಲಯಕ್ಕೆ ಹೋಗುವ ಸಲುವಾಗಿ ಸುಮಾರು 2.8 ಲಕ್ಷ ರೂ. ಗಳಿದ್ದ ತಮ್ಮ ಬ್ಯಾಗನ್ನು ಬಸ್ ನಲ್ಲಿರುವ ಲಗೇಜ್ ಇಡುವ ಸ್ಥಳದಲ್ಲಿಟ್ಟು ತೆರಳಿದ್ದಾರೆ. 10 ನಿಮಿಷದ ಬಳಿಕ ಅವರು ಬಂದ ವೇಳೆ ಬ್ಯಾಗ್ ಮಂಗಮಾಯವಾಗಿದೆ. ಇದರಿಂದ ಕಂಗಾಲಾದ ಅಶೋಕ್ ಸೀತಾರಾಂ, ಬಸ್ ತುಂಬೆಲ್ಲಾ ಹುಡುಕಾಡಿದ್ದು, ಸಿಗದ ಕಾರಣ ಅಂತಿಮವಾಗಿ ಸ್ವರ್ ಗೇಟ್ ಪೊಲೀಸರಿಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...