alex Certify
ಕನ್ನಡ ದುನಿಯಾ       Mobile App
       

Kannada Duniya

ಬೋರ್ ವೆಲ್ ನಲ್ಲಿ ಬಿದ್ದ 2 ವರ್ಷದ ಬಾಲೆ

Child-Borewell

ಜೋಧಪುರದ ಬಿಂಜ್ವಾರಾ ಹಳ್ಳಿಯಲ್ಲಿನ 700 ಅಡಿ ಆಳದ ಬೋರ್ ವೆಲ್ ನಲ್ಲಿ 2 ವರ್ಷದ ಬಾಲೆ ಬಿದ್ದಿದ್ದಾಳೆ. ಹುಡುಗಿಯ ರಕ್ಷಣಾ ಕಾರ್ಯ ನಡೆಯುತ್ತಿದೆ.

ವಿಜಯಸಿಂಹ ಎಂಬವರ ಮಗಳು ನೇಹಾ ಗೆಹ್ಲೋಟ್ ಆಟವಾಡುತ್ತಿರುವಾಗ ಈ ಅಚಾತುರ್ಯ ನಡೆದಿದೆ. ಬೋರ್ ವೆಲ್ ನ ಪಂಪ್ ಹಾಳಾಗಿದ್ದರಿಂದ ಗುರುವಾರ ಪೈಪನ್ನು ಹೊರಗೆ ತೆಗೆದಿದ್ದರು. ನೇಹಾ ಆಟವಾಡುವಾಗ ಆಯತಪ್ಪಿ ಬಿದ್ದಿದ್ದಾಳೆ.

ವಿಷಯ ತಿಳಿದ ಮೇಲೆ ಅಧಿಕಾರಿಗಳು, ಊರವರು ಸ್ಥಳಕ್ಕೆ ಧಾವಿಸಿ ಹುಡುಗಿಯ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಇದುವರೆಗೂ ನೇಹಾಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ರೀತಿ ತೆರೆದ ಬೋರ್ ವೆಲ್ ಗಳು ಮಕ್ಕಳ ಪಾಲಿಗೆ ಸಾವಿನಕೂಪವಾಗಿದೆ. ಅದೆಷ್ಟು ಮಕ್ಕಳು ಹೀಗೇ ಬಲಿಯಾಗಿದ್ದರೋ? ಆದರೆ ಸಂಬಂಧಪಟ್ಟ ಇಲಾಖೆಗಳು ಮಾತ್ರ ಇದಕ್ಕೆ ಸೂಕ್ತ ಕ್ರಮ ಕೈಗೊಂಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...