alex Certify
ಕನ್ನಡ ದುನಿಯಾ       Mobile App
       

Kannada Duniya

ಕುದಿಯುವ ನೀರು ಮೈ ಮೇಲೆ ಬಿದ್ದು ಮಗು ಸಾವು

child_representational imageಕುದಿಯುವ ನೀರು ಮೈ ಮೇಲೆ ಬಿದ್ದ ಪರಿಣಾಮ ಮೂರು ವರ್ಷದ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

ಅಲ್ಲಿನ ದೇವಾಲಯವೊಂದರಲ್ಲಿ ಭಕ್ತರಿಗಾಗಿ ಪ್ರಸಾದ ತಯಾರಿಸುವ ಕೆಲಸ ಮಾಡುತ್ತಿದ್ದ ನಂದಿನಿ ಎಂಬಾಕೆ ತನ್ನ ಮೂರು ವರ್ಷದ ಮಗನನ್ನೂ ಕರೆದುಕೊಂಡು ಹೋಗಿದ್ದು, ಪ್ರಸಾದ ತಯಾರಿಗಾಗಿ ಒಲೆಯ ಮೇಲೆ ನೀರಿನ ಪಾತ್ರೆಯನ್ನಿಟ್ಟು ಇತರೆ ಕೆಲಸಕ್ಕೆ ಮುಂದಾಗಿದ್ದಾಳೆ.

ಈ ವೇಳೆ ನೆಲದ ಮೇಲೆ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಪಾತ್ರೆಯನ್ನು ಬೀಳಿಸಿದ್ದು, ಅದರಲ್ಲಿದ್ದ ಕುದಿಯುತ್ತಿದ್ದ ನೀರು ಮಗುವಿನ ಮೇಲೆ ಬಿದ್ದಿದೆ. ಮಗುವಿನ ಚೀರಾಟ ಕೇಳಿ ಕೂಡಲೇ ಧಾವಿಸಿದ ತಾಯಿ ಮತ್ತು ಇತರೆ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...