alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಹಾರದ ಅಪಹೃತ ಬಾಲೆ ನೇಪಾಳದಲ್ಲಿ ಪತ್ತೆ

BIHAR GIRL 1ಅಪಹರಣಕಾರರ ಕಪಿಮುಷ್ಠಿಯಲ್ಲಿ ಸಿಲುಕಿದ್ದ ಬಿಹಾರದ ಈ ಮುದ್ದು ಬಾಲಕಿ ಕೊನೆಗೂ ಅಮ್ಮನ ಮಡಿಲು ಸೇರಿದ್ದಾಳೆ.

ಕಳೆದ ವಾರ ಬಿಹಾರದಲ್ಲಿ ಕಿಡ್ನಾಪ್ ಆಗಿದ್ದ ಬಾಲೆ ನಿನ್ನೆ ನೇಪಾಳದಲ್ಲಿ ಪತ್ತೆಯಾಗಿದ್ದಾಳೆ. ಉದ್ಯಮಿ ಭಾನು ಅಗರ್ವಾಲ್ ಅವರ ಪುತ್ರಿ ಸ್ಪರ್ಷ, ಶಾಲೆ ಮುಗಿಸಿಕೊಂಡು ಸ್ಕೂಲ್ ಬಸ್ ನಲ್ಲಿ ವಾಪಸ್ ಬರುತ್ತಿದ್ಲು. ಈ ವೇಳೆ ಇಬ್ಬರು , ಬಾಲಕಿಯನ್ನು ಕರೆತರಲು ಆಕೆಯ ಪೋಷಕರು ಸೂಚಿಸಿದ್ದಾರೆಂದು ಬಸ್ ಚಾಲಕನ ಬಳಿ ಸುಳ್ಳು ಹೇಳಿ ಅಪಹರಿಸಿದ್ದರು.

ಅವರಲ್ಲೊಬ್ಬ ಮೊದಲು ಶಾಲಾ ವಾಹನದ ಚಾಲಕನಾಗಿದ್ದ. ಬಾಲಕಿಯನ್ನು ಅಪಹರಿಸಿದ ಬಳಿಕ ಟಾಟಾ ಸುಮೋನಲ್ಲಿ ನೇಪಾಳಕ್ಕೆ ಪರಾರಿಯಾದ ಖದೀಮರು, ಅಲ್ಲಿಂದ ಬಾಲಕಿಯ ತಂದೆಗೆ ಕರೆ ಮಾಡಿ 25 ಕೋಟಿ ರೂಪಾಯಿ ಕೊಡುವಂತೆ ಕೇಳಿದ್ದರು. ಕಾಂಗ್ರೆಸ್ ಮುಖಂಡ ನರೇಶ್ ಯಾದವ್ ಅವರ ಪುತ್ರ ಸಂತೋಷ್ ಯಾದವ್ ಎಂಬಾತ ಕರೆ ಮಾಡಿ ಬೆದರಿಸಿದ್ದ.

ಆತನನ್ನು ಬಂಧಿಸಿದ ಪೊಲೀಸರು ಬಾಲಕಿ ಇರುವ ಸ್ಥಳ ಪತ್ತೆ ಮಾಡಿದ್ದಾರೆ. ಬಾಲಕಿಯನ್ನು ರಕ್ಷಿಸಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಕಿಡ್ನಾಪ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಸಂತೋಷ್ ಯಾದವ್ ನ ತಂದೆ ನರೇಶ್ ಯಾದವ್ ಮಾಜಿ ಸಂಸದರೂ ಹೌದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...