alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ‘ಅವಿಶ್ವಾಸ ನಿರ್ಣಯ’ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

ನವದೆಹಲಿ: ಎನ್‌ಡಿಎ ಸರಕಾರದ ವಿರುದ್ಧ ಪ್ರತಿಪಕ್ಷಗಳು ಹೂಡಿರುವ ಅವಿಶ್ವಾಸ ಗೊತ್ತುವಳಿ 90ರ ದಶಕದ ಬಳಿಕದ ಅತಿ ಸಣ್ಣ ಅವಧಿಯ ಚರ್ಚೆಯಾಗಲಿದೆ ಎಂದು ಅಂದಾಜಿಸಲಾಗಿದೆ.

2003 ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಯಲ್ಲಿ 23 ಗಂಟೆ ಚರ್ಚೆ ನಡೆದಿತ್ತು. ಇದಕ್ಕೂ ಮುನ್ನ 90ರ ದಶಕದಲ್ಲಿ ಪಿ.ವಿ. ನರಸಿಂಹ ರಾವ್‌ ನೇತೃತ್ವದ ಸರಕಾರ 3 ಬಾರಿ ಅವಿಶ್ವಾಸ ನಿರ್ಣಯಯಲ್ಲಿ ಬಚಾವಾಗಿತ್ತು. 1992 ಜುಲೈನಲ್ಲಿ 14 ಗಂಟೆ, ಡಿಸೆಂಬರ್‌ನಲ್ಲಿ 21 ಹಾಗೂ 1993ರಲ್ಲಿ 19 ಗಂಟೆಗಳ ಕಾಲ ಅವಿಶ್ವಾಸ ನಿರ್ಣಯ ಸಂಬಂಧ ಚರ್ಚೆ ನಡೆದಿತ್ತು.

ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ನಡೆಯಲಿರುವ ಅವಿಶ್ವಾಸ ಗೊತ್ತುವಳಿ ಚರ್ಚೆ ಎಲ್ಲಕ್ಕಿಂತ ಕಡಿಮೆ ಅವಧಿಯದ್ದಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಆರಂಭದಲ್ಲಿ 7 ಗಂಟೆಗಳು ಚರ್ಚೆಗೆ ಮೀಸಲಾಗಿರುತ್ತದೆ. ಆ ಬಳಿಕ ಈ ಅವಧಿಯನ್ನು ವಿಸ್ತರಿಸಲಾಗುತ್ತದೆ. ಸಾಮಾನ್ಯವಾಗಿ ಬಜೆಟ್‌ ಮೇಲಿನ ಚರ್ಚೆ, ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಹಾಗೂ ಅವಿಶ್ವಾಸ ಗೊತ್ತುವಳಿಯ ಮೇಲಿನ ಚರ್ಚೆಗಳು ಸುದೀರ್ಘ ಕಾಲಾವಧಿ ತೆಗೆದುಕೊಳ್ಳುತ್ತದೆ. ಆದರೆ ಈ ಬಾರಿಯ ಅವಿಶ್ವಾಸ ಗೊತ್ತುವಳಿ ಕಡಿಮೆ ಅವಧಿಯಲ್ಲೇ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇಂದು(ಶುಕ್ರವಾರ) 11 ಗಂಟೆಗೆ ಲೋಕಸಭೆಯಲ್ಲಿ ಪ್ರತಿಪಕ್ಷಗಳು ಗೊತ್ತುವಳಿ ಮಂಡಿಸಲಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಆಡಳಿತದ ಅವಧಿಯಲ್ಲಿ ಒಟ್ಟಾರೆ 15 ಬಾರಿ ಬಹುಮತ ಸಾಬೀತುಪಡಿಸುವಂತಾಗಿತ್ತು. ಇದು ಇತಿಹಾಸದಲ್ಲೇ ಗರಿಷ್ಠ ಸಂಖ್ಯೆ. ಜವಾಹರಲಾಲ್‌ ನೆಹರು ಸರಕಾರದ ವಿರುದ್ಧ 1963 ರಲ್ಲಿ ಜೆಬಿ ಕೃಪಾಲಿನಿ(ಆಚಾರ್ಯ ಕೃಪಾಲಿನಿ) ಮೊದಲ ಬಾರಿಗೆ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...