alex Certify
ಕನ್ನಡ ದುನಿಯಾ       Mobile App
       

Kannada Duniya

ವೀರ ವನಿತೆಯನ್ನು ನೆನಪಿಸಿದ ಗೂಗಲ್ ಡೂಡಲ್

savitribai-phule_650x400_41483387234

ಸಾವಿತ್ರಿಬಾಯಿ ಫುಲೆ ಅವರು ಸಮಾಜ ಸುಧಾರಕಿ ಹಾಗೂ ಜನಪ್ರಿಯ ಕವಯತ್ರಿ. 1831ರ ಜನವರಿ 3ರಂದು ಜನಿಸಿದ್ದರು. ಹಲವು ಕವನಗಳಲ್ಲಿ ಅವರು ತಾರತಮ್ಯ ಪದ್ಧತಿ ಹಾಗೂ ಪ್ರಸಾರ ಶಿಕ್ಷಣದ ವಿರುದ್ಧ ಧ್ವನಿಯೆತ್ತಿದ್ದರು. ಮಹಾರಾಷ್ಟ್ರದ ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ದಿಟ್ಟ ಮಹಿಳೆ. ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ತಮ್ಮ ಪತಿ ಜ್ಯೋತಿರಾವ್ ಫುಲೆ ಅವರೊಂದಿಗೆ ಸೇರಿ ಸಾವಿತ್ರಿಬಾಯಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದರು.

1848 ರಲ್ಲಿ ಪುಣೆಯ ಭಿಡೆ ವಾಡಾದಲ್ಲಿ ಮೊದಲ ಹೆಣ್ಣುಮಕ್ಕಳ ಶಾಲೆಯನ್ನು ಆರಂಭಿಸಿದ್ದರು. ಅಷ್ಟೇ ಅಲ್ಲ ದೇಶದ ಮೊದಲ ಶಿಕ್ಷಕಿ ಹಾಗೂ ಮುಖ್ಯಶಿಕ್ಷಕಿ ಎಂಬ ಹೆಗ್ಗಳಿಕೆ ಕೂಡ ಅವರದ್ದು. ಅವರಿಗೆ ಗೌರವಾರ್ಪಣೆಯಾಗಿ 2014ರಲ್ಲಿ ಪುಣೆ ಯೂನಿವರ್ಸಿಟಿಗೆ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯ ಎಂದು ಹೆಸರಿಡಲಾಗಿದೆ. ಇಂದು ಅವರ 186 ನೇ ಹುಟ್ಟುಹಬ್ಬ, ಹಾಗಾಗಿ ಗೂಗಲ್, ಸಾವಿತ್ರಿಬಾಯಿ ಫುಲೆ ಅವರ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.

ಮಹಾರಾಷ್ಟ್ರದ ಕೃಷಿಕ ಕುಟುಂಬದಲ್ಲಿ ಜನಿಸಿದ್ದ ಸಾವಿತ್ರಿಬಾಯಿ ಅವರಿಗೆ 9 ವರ್ಷದವರಿದ್ದಾಗ್ಲೇ ಜ್ಯೋತಿರಾವ್ ಅವರೊಂದಿಗೆ ಮದುವೆ ಮಾಡಲಾಗಿತ್ತು. ವಿಧವೆಯರ ಕೇಶ ಮುಂಡನ ಸಂಪ್ರದಾಯದ ವಿರುದ್ಧ ಕೂಡ ಫುಲೆ ಹೋರಾಟ ನಡೆಸಿದ್ದಾರೆ. ಅಷ್ಟೇ ಅಲ್ಲ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದ ಹೆಣ್ಣುಮಕ್ಕಳ ಹೆರಿಗೆಗೆ ನೆರವಾಗಲು ಸಹಾಯ ಕೇಂದ್ರವೊಂದನ್ನು ಆರಂಭಿಸಿದ್ದರು. 1897ರ ಮಾರ್ಚ್ 10ರಂದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲೇ ಸಾವಿತ್ರಿಬಾಯಿ ಫುಲೆ ಇಹಲೋಕ ತ್ಯಜಿಸಿದ್ದರು. ದಲಿತರು, ಹಿಂದುಳಿದ ವರ್ಗದವರು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ವೀರ ವನಿತೆಯನ್ನು ಡೂಡಲ್ ಮೂಲಕ ಗೂಗಲ್ ನೆನಪಿಸಿಕೊಟ್ಟಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...